ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆಹರು ಯುವಕೇಂದ್ರ ಪುತ್ತೂರು ತಾಲೂಕು ಸಂಯೋಜಕರಾಗಿ ಗೌತಮ್ ರಾಜ್ ಹಾಗೂ ಪ್ರಜ್ಞಾ ಕುಲಾಲ್ ಕಾವು ಆಯ್ಕೆ

ನೆಹರು ಯುವಕೇಂದ್ರ ಪುತ್ತೂರು ತಾಲೂಕು ಸಂಯೋಜಕರಾಗಿ ಗೌತಮ್ ರಾಜ್ ಹಾಗೂ ಪ್ರಜ್ಞಾ ಕುಲಾಲ್ ಕಾವು ಆಯ್ಕೆ

 


ಪುತ್ತೂರು: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವಕೇಂದ್ರ ಮಂಗಳೂರು ಇದರ ಪುತ್ತೂರು ತಾಲೂಕು ಸಂಯೋಜಕರಾಗಿ ಗೌತಮ್ ರಾಜ್ ಹಾಗೂ ಪ್ರಜ್ಞಾ ಕುಲಾಲ್ ಕಾವು ಆಯ್ಕೆಗೊಂಡಿದ್ದಾರೆ.

ಯುವಕ ಯುವತಿ‌ ಮಂಡಲ, ಯುವ ಸಮುದಾಯವನ್ನು ಉತ್ತಮ‌ ಚಟುವಟಿಕೆಗಳಲ್ಲಿ ತೊಡಗಿಸುಕೊಳ್ಳುವಂತೆ ಪ್ರೇರೆಪಿಸುವುದು ಸಂಯೋಜಕರ ಜವಾಬ್ದಾರಿಯಾಗಿದೆ.

ತಾಲೂಕು ಸಂಯೋಜಕರ ಸೇವಾ ಅವಧಿ ಎರಡು ವರ್ಷಗಳ ಕಾಲ ಇದ್ದು, ಜಿಲ್ಲಾ ಸಮನ್ವಯಾಧಿಕಾರಿಯವರ ನಿರ್ದೇಶನದಂತೆ ಉತ್ತಮಕಾರ್ಯ ನಿರ್ವಹಿಸುವುದು ಇದರ ಜವಾಬ್ದಾರಿಯಾಗಿದೆ.

  ಗೌತಮ್ ರಾಜ್ ಕರಂಬಾರು ಇವರು ರಾಜ್ಯಪ್ರಶಸ್ತಿ ಪುರಸ್ಕೃತ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಅಧ್ಯಕ್ಷರಾಗಿದ್ದು, ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿದ್ದಾರೆ.

ಇವರು ಸರ್ವೆ ಗ್ರಾಮದ ವೀರಪ್ಪಗೌಡ ಕರಂಬಾರು ಹಾಗು ದಿ.ಚಂದ್ರಾವತಿ ಕರಂಬಾರು ದಂಪತಿಯ ಪುತ್ರ. Upayuktha

ಯುವ ಕವಯತ್ರಿಯಾಗಿರುವ ಪ್ರಜ್ಞಾ ಕುಲಾಲ್ ಕಾವು ಇವರು ಪ್ರಸ್ತುತ ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರು ಕುಂಬ್ರ ಶಾರದ ವಿದ್ಯಾಲಯಲ್ಲಿ ಶಿಕ್ಷಕಿಯಾಗಿ ಹಾಗೂ ಆನ್ ಲೈನ್ ನ್ಯೂಸ್ ವರದಿಗಾರರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಇವರು ಕಾವು ವೆಂಕಪ್ಪ ಕುಲಾಲ್ ಮತ್ತು ಮೀನಾಕ್ಷಿ ದಂಪತಿಗಳ ಪುತ್ರಿ.

0 تعليقات

إرسال تعليق

Post a Comment (0)

أحدث أقدم