ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 5ನೇ ಬಾರಿಗೆ ಯಶಸ್ವಿಯಾಗಿ ಹೃದಯದ ಮರು ಬೈಪಾಸ್ ಸರ್ಜರಿ: ವೈದ್ಯರ ಸಾಧನೆ

5ನೇ ಬಾರಿಗೆ ಯಶಸ್ವಿಯಾಗಿ ಹೃದಯದ ಮರು ಬೈಪಾಸ್ ಸರ್ಜರಿ: ವೈದ್ಯರ ಸಾಧನೆ



ಮಂಗಳೂರು: ಈ ಹಿಂದೆ ಬೈಪಾಸ್ ಸೇರಿದಂತೆ ನಾಲ್ಕು ಬಾರಿ ಹೃದಯ ಶಸ್ತ್ರಚಿಕಿತ್ಸೆಗೊಳಪಟ್ಟಿದ್ದ ರೋಗಿಯೊಬ್ಬರಿಗೆ ಇಂಡಿಯಾನ ಆಸ್ಪತ್ರೆ ಮರು ಬೈಪಾಸ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.


ಕೇರಳದ ತ್ರಿಚೂರ್‌ನ 55ರ ಹರೆಯದ ಉಮರ್ ಎಂಬವರಿಗೆ ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಬೀಟಿಂಗ್ ಹಾರ್ಟ್ ಸರ್ಜರಿ (ಹೃದಯದ ಬಡಿತವನ್ನು ನಿಲ್ಲಿಸದೆ) ವಿಧಾನದ ಮೂಲಕ ಹೃದ್ರೋಗ ತಜ್ಞ ಡಾ. ಎಂ.ಕೆ. ಮೂಸಾ ಕುಂಞಿ ನೇತೃತ್ವದಲ್ಲಿ ಈ ಅಪರೂಪದ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಯಿತು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.


ಹೃದಯ ಶಸ್ತ್ರ ಚಿಕಿತ್ಸೆ ಮತ್ತು ಹೃದಯ ಕಸಿ ಕೇಂದ್ರವಾದ ಇಂಡಿಯಾನ ಆಸ್ಪತ್ರೆಯಲ್ಲಿ ನಡೆಸಲಾದ ಈ ಅಪರೂಪದ ಶಸ್ತ್ರ ಚಿಕಿತ್ಸೆ ಮಂಗಳೂರು ಮತ್ತು ದಕ್ಷಿಣ ಭಾರತದಲ್ಲಿಯೇ ಮೊದಲನೆಯದಾಗಿದೆ.ರೋಗಿಯು 15 ವರ್ಷಗಳ ಹಿಂದೆ ಎದೆ ನೋವನ್ನು ಮೊದಲು ಅನುಭವಿಸಿ ಹೃದಯದಲ್ಲಿ ಅನೇಕ ಬ್ಲಾಕ್‌ಗೆ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು. ಏಳು ವರ್ಷಗಳ ಹಿಂದೆ ಮತ್ತೆ ಹೊಸ ಬ್ಲಾಕ್‌ಗಳು ಅವರ ಹೃದಯದಲ್ಲಿ ಉಂಟಾಗಿದ್ದು, ಆ ಸಂದರ್ಭ ಬೈಪಾಸ್ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇಚರಿಸಿಕೊಂಡಿದ್ದರು. ನಂತರ ಅವರ ಎದೆಯ ಮೂಳೆ ಗುಣಪಡಿಸುವಿಕೆ ಸಂಬಂಧಿಸಿ ಇನ್ನೂ ಎರಡು ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿ ಆರೋಗ್ಯವಾಗಿದ್ದರು. ಎರಡು ತಿಂಗಳ ಹಿಂದೆ ಮತ್ತೆ ತೀವ್ರವಾದ ಎದೆ ನೋವು ಮತ್ತು ನಡೆಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ವೈದ್ಯಕೀಯ ತಪಾಸಣೆಯ ವೇಳೆ ತೀವ್ರವಾದ ಬ್ಲಾಕ್‌ಗಳ ಬೆಳವಣಿಗೆ ಕಂಡು ಬಂದಿತ್ತು. ಇದು ಅವರ ಹೃದಯ ಸ್ನಾಯುಗಳಿಗೆ ತುಂಬಾ ಕಡಿಮೆ ರಕ್ತ ಹರಿಯುವಂತೆ ಮಾಡಿತ್ತು. ಹೀಗಾಗಿ ಅವರಿಗೆ ಕ್ಲಿಷ್ಟಕರ ಮರು ಬೈಪಾಸ್ ಹೃದಯ ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡಲಾಯಿತು. Upayuktha


ಸುಮಾರು ಆರು ಗಂಟೆಗಳ ಶಸ್ತ್ರ ಚಿಕಿತ್ಸೆಯ ಮೂಲಕ ಅವರ ಪುನರಾವರ್ತಿತ ಬ್ಲಾಕ್‌ಗಳನ್ನು ತೆಗೆಯಲಾಯಿತು. ರೋಗಿಯ ಕಾಲುಗಳಿಂದ ತೆಗೆದ ರಕ್ತನಾಳಗಳನ್ನು ಬ್ಲಾಕ್‌ಗಳ ಬೈಪಾಸ್ ಮಾಡಲು ಬಳಸಲಾಯಿತು. ಈಗ ರೋಗಿಯ ಹೃದಯವು ಯಾವುದೇ ಸಂದರ್ಭದಲ್ಲಿ ಆರಾಮವಾಗಿ ಕೆಲಸ ಮಾಡಲು ಸಾಕಷ್ಟು ರಕ್ತವನ್ನು ಪಡೆಯುತ್ತಿದೆ. ಬೀಟಿಂಗ್ ಹಾರ್ಟ್ ಬೈಪಾಸ್ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಈ ಸ್ನಾಯುವನ್ನು ಕತ್ತರಿಸಲು ಅತ್ಯಂತ ಪರಿಣತಿ ಹಾಗೂ ಶಸ್ತ್ರ ಚಿಕಿತ್ಸಾ ಕೌಶಲ್ಯಗಳು ಅಗತ್ಯವಾಗಿರುತ್ತದೆ. ಆದರೆ ಬೀಟಿಂಗ್ ಹಾರ್ಟ್ ಶಸ್ತ್ರ ಚಿಕಿತ್ಸೆಯಲ್ಲಿ ವ್ಯಾಪಕ ಅನುಭವ ಹೊಂದಿರುವ ಡಾ. ಮೂಸಾ ಕುಂಞಿಯವರು 3 ಸೆ.ಮೀ. ಉದ್ದದ ಮಾಂಸ ಖಂಡವನ್ನು ಕತ್ತರಿಸಿ ಅಪಧಮನಿಯ ಮೇಲಿನ ಒತ್ತಡವನ್ನು ನಿವಾರಿಸಲು ನಿರ್ಧರಿಸಿದರು. ಪ್ರಸಕ್ತ ರೋಗಿಯು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಸಿದ್ಧರಾಗಿದ್ದಾರೆ ಎಂದು ಡಾ. ಯೂಸುಫ್ ಕುಂಬ್ಳೆ ತಿಳಿಸಿದರು.


ಗೋಷ್ಠಿಯಲ್ಲಿ ಡಾ. ಮೂಸ ಕುಂಞಿ, ಡಾ. ಸಿದ್ಧಾರ್ಥ್, ಡಾ. ಸಚಿನ್ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم