ಮಂಗಳೂರು: ಯಶಸ್ವಿ ಉದ್ಯಮಿ, ಹಲವಾರು ವಿದ್ಯಾಸಂಸ್ಥೆ, ಧಾರ್ಮಿಕ ಕೇಂದ್ರಗಳ ಏಳಿಗೆಗೆ ಶ್ರಮಿಸಿದ ಸಮಾಜಸೇವಕ, ಬಿಲ್ಲವ ಸಮಾಜದ ನಾಯಕ, ಕೊಡುಗೈ ದಾನಿ, ಪ್ರಖ್ಯಾತ ಜೆ.ವಿ. ಸನ್ಸ್ ಸಂಸ್ಥೆಯ ಸ್ಥಾಪಕ ಜೆ.ವಿ.ಸೀತಾರಾಮ್ ಇಂದು (ಜುಲೈ 28) ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ಮೃತರು ಪುತ್ರ ನಾರ್ಥನ್ ಸ್ಕೈ ಪ್ರಾಪರ್ಟೀಸ್ ಆಡಳಿತ ಪಾಲುದಾರ ಧೀರಜ್ ಅಮೀನ್, ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ನಂದಿಗುಡ್ಡೆ ಸ್ಮಶಾನದಲ್ಲಿ ನಡೆಯಲಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق