ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದುರಂತ ನಿರ್ವಹಣೆ: ಗೃಹರಕ್ಷಕ ದಳದಿಂದ ಅಣಕು ಕಾರ್ಯಾಚರಣೆ

ದುರಂತ ನಿರ್ವಹಣೆ: ಗೃಹರಕ್ಷಕ ದಳದಿಂದ ಅಣಕು ಕಾರ್ಯಾಚರಣೆ


ಮಂಗಳೂರು: ದ.ಕ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಕೂಳೂರು ಸಮೀಪದ ನದಿಯಲ್ಲಿ ದುರಂತ ನಿರ್ವಹಣಾ ಅಣಕು ಪ್ರಾತ್ಯಕ್ಷಿಕೆ ನಡೆಯಿತು.


ದುರಂತಗಳನ್ನು ಎದುರಿಸುವಾಗ ಸಾಕಷ್ಟು ಪೂರ್ವತಯಾರಿ, ಪೂರ್ವ ಸಿದ್ಧತೆ ಮತ್ತು ಮಾನಸಿಕವಾಗಿ ಸನ್ನದ್ದರಾಗಿದ್ದರೆ ಹೆಚ್ಚು ಪರಿಣಾಮಕಾರಿಯಾಗಿ ವಿಕೋಪಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ತಂಡದ ವತಿಯಿಂದ ಕೇಂದ್ರ ಕಚೇರಿಯಿಂದ ದೊರಕಿದ ಗಾಳಿ ತುಂಬಿಸಿ ಓಡಿಸಬಹುದಾದ ಯಂತ್ರ ಚಾಲಿತ ಬೋಟುಗಳನ್ನು ಕೂಳೂರಿನ ಸಮೀಪದ ನದಿಯಲ್ಲಿ ಪ್ರಾಯೋಗಿಕವಾಗಿ ಓಡಿಸಿ ಯಂತ್ರ ಮತ್ತು ಬೋಟಿನ ಸುಸ್ಥಿತಿಯನ್ನು ಪರಿಶೀಲಿಸಲಾಗಿದೆ.


ನುರಿತ ಈಜುಗಾರರು ಮತ್ತು ಬೋಟು ಚಾಲಕರು ಈ ಕಾರ್ಯವನ್ನು ನಿರ್ವಹಿಸಿದ್ದು, ಅಣಕು ಕಾರ್ಯಾಚರಣೆ ನಡೆಸಿ ಸಾಕಷ್ಟು ಪೂರ್ವ ತಯಾರಿ ನಡೆಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ನುಡಿದರು.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಬೋಟುಗಳು ಲಭ್ಯವಿದ್ದು, ಮುಲ್ಕಿ, ಮಂಗಳೂರು, ಬಂಟ್ವಾಳ, ಉಪ್ಪಿನಂಗಡಿ ಮತ್ತು ಸುಬ್ರಹ್ಮಣ್ಯಗಳಲ್ಲಿ ಈ ಬೋಟು ತಕ್ಷಣಕ್ಕೆ ದೊರಕುವಂತೆ ವ್ಯವಸ್ಥಿತವಾಗಿ ಇಡಲಾಗಿದೆ. ನುರಿತ ಚಾಲಕರು ಮತ್ತು ಈಜುಗಾರರು ಲಭ್ಯವಿದ್ದಾರೆ ಎಂದು ಡಾ. ಚೂಂತಾರು ನುಡಿದರು.


ಇಂದು (ಜು.2) ನಗರದ ಕೂಳೂರು ಸೇತುವೆ ಬಳಿಯ ನದಿಯಲ್ಲಿ ಈ ಪ್ರಾಯೋಗಿಕ ಪರೀಕ್ಷೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಪರಿಣಿತ ಪ್ರವಾಹ ರಕ್ಷಣಾ ತಂಡದ ಸದಸ್ಯರು ನಡೆಸಿದರು. ಈ ಸಂದರ್ಭದಲ್ಲಿ ಉಪ ಸಮಾದೇಷ್ಟರಾದ ರಮೇಶ್, ಗೃಹರಕ್ಷಕರಾದ ಸುನಿಲ್ ಪೂಜಾರಿ, ಪ್ರಸಾದ್, ಸುನಿಲ್, ನಿಖಿಲ್, ದುಶ್ಯಂತ್, ಸಂಶುದ್ದೀನ್, ಕನಕಪ್ಪ, ದಿವಾಕರ್ ಉಪಸ್ಥಿತರಿದ್ದರು.


0 تعليقات

إرسال تعليق

Post a Comment (0)

أحدث أقدم