ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸ್ನೇಹಿತರ ಜೊತೆ ಮದುವೆಗೆ ಹೋದ ಯುವಕ ಹೃದಯಾಘಾತದಿಂದ ಸಾವು

ಸ್ನೇಹಿತರ ಜೊತೆ ಮದುವೆಗೆ ಹೋದ ಯುವಕ ಹೃದಯಾಘಾತದಿಂದ ಸಾವು

 


ವಿರಾಜಪೇಟೆ: ಇಲ್ಲಿಯ ಜೈನರ ಬೀದಿಯ ವಸತಿ ಗೃಹದಲ್ಲಿ ವಾಸವಾಗಿದ್ದ ಬೆಂಗಳೂರು ರಾಮಮೂರ್ತಿ ನಗರದ ಕೃಷ್ಣಪ್ಪ ರವರ ಪುತ್ರ ಮಧು (33) ವರ್ಷದ ಯುವಕ ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ.


ಮಧು ತನ್ನ ಸ್ನೇಹಿತರೊಂದಿಗೆ ವಿರಾಜಪೇಟೆ ಚೆಂಬೆಳ್ಳುರುವಿನಲ್ಲಿ ನಡೆದ ವಿವಾಹಕ್ಕೆ ಜೂ. 30ರಂದು ಆಗಮಿಸಿ ಅಲ್ಲಿಯೇ ಸ್ನೇಹಿತರೊಂದಿಗೆ ಇದ್ದರು.


 ಗುರುವಾರ ಬೆಳಿಗ್ಗೆ ಎಲ್ಲರೂ ಬೆಂಗಳೂರಿಗೆ ಹಿಂತಿರುಗಲು ಸಿದ್ಧತೆ ನಡೆಸಿದ್ದಾರೆ. 


ಈ ವೇಳೆ ರಾತ್ರಿ ಮಲಗಿದ್ದ ಮಧು ಬೆಳಿಗ್ಗೆ ಸ್ನೇಹಿತರು ಎಬ್ಬಿಸಲು ಪ್ರಯತ್ನಿಸಿದಾಗ ಹೃದಯಾಘಾತದಿಂದ ನಿಧನರಾಗಿರುವುದು ಗೊತ್ತಾಗಿದೆ. 


ಈ ಬಗ್ಗೆ ವಿರಾಜಪೇಟೆ ನಗರ ಪೋಲಿಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

0 تعليقات

إرسال تعليق

Post a Comment (0)

أحدث أقدم