ಉಜಿರೆ: ಮಾಜಿ ಸಚಿವ ಹಾಗೂ ಹಿರಿಯ ಗಾಂಧೀವಾದಿ ಜಿ. ಮಾದೇ ಗೌಡರ ನಿಧನದ ಬಗ್ಯೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.
ಸದಾ ಶ್ವೇತ ವಸ್ತ್ರಧಾರಿಯಾಗಿ, ಪ್ರಕೃತಿ ಚಿಕಿತ್ಸಾ ಪದ್ಧತಿ ಬಗ್ಯೆ ಅಪಾರ ಅಭಿಮಾನ ಹೊಂದಿದ್ದ ಅವರು ಸರಳ ಸಾತ್ವಿಕ ವ್ಯಕ್ತಿಯಾಗಿ ಆದರ್ಶ ಜೀವನ ನಡೆಸಿದ್ದಾರೆ. ರಾಜಕೀಯದಲ್ಲೂ ಆದರ್ಶವಾದಿಯಾಗಿ ಕರ್ನಾಟಕದ ನೆಲ, ಜಲ, ಭಾಷೆ ಮತ್ತು ಕೃಷಿಕರ ಪರವಾಗಿ ಸದಾ ಚಿಂತನೆ ಮಾಡಿ ಉತ್ತಮ ಸೇವೆ ನೀಡಿದ್ದಾರೆ. “ಶರಣರ ಗುಣವನ್ನು ಮರಣದಲ್ಲಿ ನೋಡು” ಎನ್ನುವಂತೆ ಅವರ ನಿಸ್ವಾರ್ಥ ಸೇವೆಯಿಂದ ಸದಾ ಸ್ಮರಣೀಯರಾಗಿದ್ದಾರೆ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಹೆಗ್ಗಡೆಯವರು ಪ್ರಾರ್ಥಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق