ಮಂಗಳೂರು: ಮಂಗಳೂರು ಜಂಕ್ಷನ್- ತೋಕೂರು ನಡುವೆ ರೈಲು ಹಳಿಗಳ ಮೇಲೆ ಮಣ್ಣು ಕುಸಿದಿರುವ ಹಿನ್ನೆಲೆಯಲ್ಲಿ ಇಂದೂ ಸಹ ಕೆಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಮುಂಬಯಿ ಸಿಎಸ್‌ಎಂಟಿ- ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ಸ್ಪೆಷಲ್ (ಟ್ರೈನ್ ಸಂಖ್ಯೆ 01133) ನಿನ್ನೆ (ಜು.16) ಮುಂಬಯಿ ಬಿಟ್ಟಿದ್ದು, ಇಂದು ಮಂಗಳೂರು ಜಂಕ್ಷನ್ ತಲುಬೇಕಿತ್ತು. ಅದನ್ನು ಸುರತ್ಕಲ್‌ನಲ್ಲೇ ನಿಲುಗಡೆ ಮಾಡಲು ದಕ್ಷಿಣ ರೈಲ್ವೇ ಪಾಲ್ಘಾಟ್ ವಿಭಾಗದ ಅಧಿಕಾರಿಗಳು ಸೂಚಿಸಿದ್ದಾರೆ.
ಈ ರೈಲಿನಲ್ಲಿ ಆಗಮಿಸುವ ಪ್ರಯಾಣಿಕರಿಗೆ ಸುರತ್ಕಲ್‌ನಿಂದ ಮಂಗಳೂರಿಗೆ ಬರಲು ಬಸ್ ವ್ಯವಸ್ಥೆ ಮಾಡಲಾಗಿದೆ.
ಅದೇ ರೀತಿ ಮಂಗಳೂರು ಜಂಕ್ಷನ್- ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ಸ್ಪೆಷಲ್ (ರೈಲು ಸಂಖ್ಯೆ 01134) ಇಂದು ಸಂಜೆ 4:35ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಬೆಕಿತ್ತು. ಅದನ್ನು ಸಂಜೆ 5:16ಕ್ಕೆ ಸುರತ್ಕಲ್ ನಿಲ್ದಾಣದಿಂದ ಹೊರಡುವಂತೆ ಮರುನಿಗದಿ ಮಾಡಲಾಗಿದೆ. ಮಂಗಳೂರು ಜಂಕ್ಷನ್‌ನಿಂದ ಸುರತ್ಕಲ್ ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಪ್ರಯಾಣಿಕರಿಗಾಗಿ ಮಂಗಳೂರು ಸೆಮಟ್ರಲ್, ಕಣ್ಣೂರು, ಕೋಯಿಕ್ಕೋಡ್ ಮತ್ತು ಶೋರ್ನೂರ್ ಜಂಕ್ಷನ್‌ಗಳಲ್ಲಿ ವಿಶೇಷ ಹೆಲ್ಪ್ ಡೆಸ್ಕ್‌ಗಳನ್ನು ಆರಂಭಿಸಲಾಗಿದೆ. ಸಹಾಯವಾಣಿ- 0491-2556198
إرسال تعليق