ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಟಿ ಅನು 'ಜೊತೆ ಜೊತೆಯಲಿ' ಸೀರಿಯಲ್ ಬಿಟ್ಟು ಹೋಗುತ್ತಾರಾ..??

ನಟಿ ಅನು 'ಜೊತೆ ಜೊತೆಯಲಿ' ಸೀರಿಯಲ್ ಬಿಟ್ಟು ಹೋಗುತ್ತಾರಾ..??

 


ಬೆಂಗಳೂರು: ಎಲ್ಲೆಡೆ ಜನಪ್ರಿಯವಾದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯಿಂದ ನಾಯಕಿ ಅನುಸಿರಿಮನೆ ಅಲಿಯಾಸ್ ನಟಿ ಮೇಘಾ ಶೆಟ್ಟಿ ಹೊರಬಂದಿದ್ದಾರೆ ಎಂಬ ವಿಚಾರ ಕೇಳಿ ಬಂದಿದೆ.


ಮೇಘಾ ಶೆಟ್ಟಿಯವರು ಇದೀಗ ತಮ್ಮ ಕೊನೆಯ ಹಂತದ ಶೂಟಿಂಗ್ ಮುಗಿಸಿದ್ದು, ಮುಂದಿನ ದಿನಗಳಲ್ಲಿ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅನು ಸಿರಿಮನೆಯಾಗಿ ಕಾಣಿಸಿಕೊಳ್ಳಲ್ಲ ಎನ್ನಲಾಗಿದೆ.


 ಈ ವಿಚಾರ ಬಗ್ಗೆ ಧಾರವಾಹಿ ತಂಡವನ್ನು ಸಂಪರ್ಕಿಸಿದಾಗ ಈ ಸುದ್ದಿ ನಿಜ ಎಂದಿದ್ದಾರೆ. ಹೀಗಾಗಿ ಅನು ಸಿರಿಮನೆ ಪಾತ್ರಕ್ಕೆ ಬೇರೊಬ್ಬರು ನಟಿ ಬರುವುದು ಸತ್ಯ ಆಗಿದೆ. ಆದರೆ ಮೇಘಾ ಹೊರಹೋಗುತ್ತಿರುವ ವಿಚಾರ ತಿಳಿದು ಅವರ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.


ಸಾಮಾಜಿಕ ಜಾಲತಾಣಗಳ ಮೂಲಕ ಮೇಘಾ ಅವರೇ ಅನು ಸಿರಿಮನೆಯಾಗಿ ಮುಂದುವರಿಯಬೇಕು ಎಂದು ಆಗ್ರಹಿಸಿದ್ದಾರೆ.


ಸೀರಿಯಲ್ ಬಿಡಲು ಕಾರಣ ಇನ್ನೂ ತಿಳಿದುಬಂದಿಲ್ಲ.  ಆದರೆ ಈ ಬಗ್ಗೆ ಸ್ವತಃ ಮೇಘಾ ಶೆಟ್ಟಿ ಅವರು ಇನ್ನೂ ಸ್ಪಷ್ಟನೆ ಅಥವಾ ಯಾವುದೇ ಹೇಳಿಕೆ ಕೊಟ್ಟಿಲ್ಲ.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم