ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜು.20: ಅಮೃತ ಪ್ರಕಾಶ ಪತ್ರಿಕೆಯ 8ನೇ ವಾರ್ಷಿಕೋತ್ಸವ, ವಿಶೇಷ ಸಂಚಿಕೆ ಬಿಡುಗಡೆ

ಜು.20: ಅಮೃತ ಪ್ರಕಾಶ ಪತ್ರಿಕೆಯ 8ನೇ ವಾರ್ಷಿಕೋತ್ಸವ, ವಿಶೇಷ ಸಂಚಿಕೆ ಬಿಡುಗಡೆ



ಮಂಗಳೂರು: ಅಮೃತ ಪ್ರಕಾಶ ಪತ್ರಿಕೆಯ 8ನೇ ವಾರ್ಷಿಕೋತ್ಸವ ಜು.20ರಂದು ಬೆಳಗ್ಗೆ ನಗರದ ಪತ್ರಿಕಾ ಭವನದಲ್ಲಿ ನಡೆಯಲಿದೆ.


ಸೂರ್ಯವಂಶ ಪ್ರತಿಷ್ಠಾನ ಕೈಕಂಬ ಬಿ.ಸಿರೋಡ್ ಇದರ ಸಂಸ್ಥಾಪಕರಾದ ಪ್ರೊ. ಡಾ. ಗೋವರ್ಧನ ರಾವ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಸಾಹಿತ್ಯ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ ಅವರು ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.


ಮುಖ್ಯ ಅತಿಥಿಯಾಗಿ ಖ್ಯಾತ ದಂತ ವೈದ್ಯರು, ಸಾಹಿತಿಗಳು, ಗೃಹರಕ್ಷಕ ದಳದ ಸಮಾದೇಷ್ಟರಾಗಿರುವ ಡಾ. ಮುರಲಿ ಮೋಹನ್ ಚೂಂತಾರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post