ಉಪ್ಪಿನಂಗಡಿ : ನೆಲ್ಯಾಡಿ ಹತ್ತಿರದ ಕೊಕ್ಕಡ ಎಂಬಲ್ಲಿ ಗುರುವಾರ ಪತಿ ಹಾಗೂ ಪತ್ನಿ ಒಂದೇ ದಿನ 5 ಗಂಟೆ ಗಂಟೆಯೊಳಗೆ ಮೃತಪಟ್ಟಿದ್ದಾರೆ.
ಕೊಕ್ಕಡ ಗ್ರಾಮದ ಪುನ್ನತ್ತಾನಾತ್ ನಿವಾಸಿ, ಕೃಷಿಕ ವರ್ಗೀಸ್ ಪಿ.ವಿ.(74) ವರ್ಷ ಹಾಗೂ ಅವರ ಪತ್ನಿ ಮೇರಿ ವರ್ಗೀಸ್ ಪಿ.ವಿ.(73) ವರ್ಷ ಮೃತಪಟ್ಟವರು.
ಇಬ್ಬರಿಗೂ ಕಳೆದ ತಿಂಗಳು 25 ರಂದು ಜ್ವರ ಬಂದಿದ್ದು ಅದಕ್ಕೆ ಔಷಧಿ ಪಡೆದು ಗುಣಮುಖರಾಗಿದ್ದರು. ಆದರೆ ಇಬ್ಬರಿಗೂ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ವೇಳೆ ಇಬ್ಬರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಚಿಕಿತ್ಸೆ ಫಲಿಸದೇ ನಿಧನರಾದರು.
ಅವರಿಗೆ ಬೆಳ್ತಂಗಡಿ ಮುಂಡಾಜೆ ಸೇಂಟ್ ಮೇರಿಸ್ ಚರ್ಚ್ ಧರ್ಮಗುರು ವಿನೋಯ್ ಸೆಬಾಸ್ಟಿನ್ ಸೇರಿದಂತೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
Post a Comment