ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತುಳುನಾಡಿನ ಮನ ಗೆದ್ದ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ 'ಧರ್ಮ ದೈವ': ಲಕ್ಷ ದಾಟಿದ ವೀಕ್ಷಕರು

ತುಳುನಾಡಿನ ಮನ ಗೆದ್ದ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ 'ಧರ್ಮ ದೈವ': ಲಕ್ಷ ದಾಟಿದ ವೀಕ್ಷಕರು


ತುಳುನಾಡಿನ ದೈವಗಳ ಕಾರಣಿಕವನ್ನು ತೋರಿಸುವ ಕಥಾ ಹಂದರವಿರುವ ನಿತಿನ್ ರೈ ಕುಕ್ಕುವಳ್ಳಿ ಕಥೆ ಬರೆದು ನಿರ್ದೇಶನ ಮಾಡಿರುವ 'ಧರ್ಮ ದೈವ' ಕಿರು ಚಿತ್ರ ಬಿಡುಗಡೆಗೊಂಡು ಅದ್ಭುತ ಯಶಸ್ಸಿನೊಂದಿಗೆ ಪ್ರದರ್ಶನಗೊಳ್ಳುತ್ತಿದೆ. ಈಗಾಗಲೇ ಕೇವಲ 2 ವಾರಗಳಲ್ಲಿ  ಪ್ರಪಂಚದಾದ್ಯಂತ 1 ಲಕ್ಷ ಜನ ಈ ಚಿತ್ರ ವೀಕ್ಷಿಸಿದ್ದಾರೆ.


ಜೊತೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಮೋಹನ್ ಆಳ್ವ, ನಟ ದೇವದಾಸ್ ಕಾಪಿಕಾಡ್, ನಾಟಕಕಾರ - ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ - ನಾಯಕ ನಟ ಶಿವಧ್ವಜ್ ಶೆಟ್ಟಿ, ನಿರ್ದೇಶಕ ಕುಂಬ್ರ ರಘುನಾಥ ರೈ, ಸುದ್ದಿ ಬಿಡುಗಡೆಯ ಮುಖ್ಯಸ್ಥರಾದ ಡಾ |ಯು.ಪಿ.ಶಿವಾನಂದ, ನಟ-ನಿರ್ದೇಶಕ ಶೋಭರಾಜ್ ಪಾವೂರು, ಪೃಥ್ವಿ ಅಂಬಾರ್, ಚೇತನ್ ರೈ ಮಾಣಿ, ಎಮ್. ಕೆ .ಮಠ, ಸೌರಾಜ್ ಶೆಟ್ಟಿ  ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.


ಪರಿಣತ ಕಲಾವಿದರು ಮತ್ತು ತಾಂತ್ರಿಕ ವರ್ಗ:

ಚಿತ್ರದ ಚಿತ್ರೀಕರಣ, ಶತಮಾನದ ಇತಿಹಾಸವಿರುವ ಬೆಳ್ಳಾರೆಯ 'ತೋಟ' ಮನೆಯಲ್ಲಿ ನಡೆದಿದ್ದು. ಹಮೀದ್ ಪುತ್ತೂರು ಅವರ ಚಿತ್ರಕಥೆ ಇದೆ. ಚಿತ್ರದಲ್ಲಿ ರಂಗಭೂಮಿ ಮತ್ತು ಸಿನಿಮಾ ನಟ ತುಳುನಾಡ ಚಾಣಕ್ಯ ರಮೇಶ್ ರೈ ಕುಕ್ಕುವಳ್ಳಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೆಸರಾಂತ ರಂಗನಟ ಸುಂದರ್ ರೈ ಮಂದಾರ, ಪೆನ್ಸಿಲ್ ಬಾಕ್ಸ್ ಖ್ಯಾತಿಯ ಕು. ದೀಕ್ಷಾ ಡಿ. ರೈ, ಚಿತ್ತರಂಜನ್ ರೈ ನುಳಿಯಾಲು, ವಸಂತ ಲಕ್ಷ್ಮಿ, ಕೌಶಿಕ್ ರೈ ಕುಂಜಾಡಿ, ನಿತೇಶ್  ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  


ಚಿತ್ರವನ್ನು ಸುಧಾಕರ್ ಪಡೀಲ್ ತಮ್ಮ ಸೋನು ಕ್ರಿಯೇಷನ್ ಅಡಿಯಲ್ಲಿ ನಿರ್ಮಿಸಿದ್ದಾರೆ.. ಹರೀಶ್ ಪುತ್ತೂರು ಕ್ಯಾಮರಾ ಕೆಲಸ ಮಾಡಿದ್ದು ರಾಧೇಶ್ ರೈ ಮೊಡಪ್ಪಾಡಿ ಅವರ  ಸಂಕಲನ ಮತ್ತು ಧ್ವನಿಗ್ರಹಣ, ಹಿನ್ನೆಲೆ ಸಂಗೀತವಿದ್ದು ಪ್ರೇಮ್ ರಾಜ್ ಆರ್ಲಪದವು ಅವರ ಪ್ರಸಾಧನ ಈ ಕಿರು ಚಿತ್ರಕ್ಕಿದೆ. ಸಂಭಾಷಣೆಯನ್ನು ಹಮೀದ್ ಪುತ್ತೂರು ಮತ್ತು ನಾರಾಯಣ ರೈ ಕುಕ್ಕುವಳ್ಳಿ ಬರೆದಿದ್ದಾರೆ. ಈ ಕಿರುಚಿತ್ರದಲ್ಲಿ ಭೂತಾರಾಧನೆ ಕುರಿತಾದ ವಿಶೇಷ ಮಾಹಿತಿಯನ್ನು ಕಲಾತ್ಮಕವಾಗಿ ಅಳವಡಿಸಲಾಗಿದ್ದು ಹಿನ್ನೆಲೆ ಧ್ವನಿಯನ್ನು ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಅಶ್ವಿನಿ ಪೆರುವಾಯಿ ನೀಡಿದ್ದಾರೆ. ಧನು ರೈ, ನಿತಿನ್ ಕಾನಾವು ಅವರ ಗ್ರಾಫಿಕ್ಸ್, ಪ್ರಣವ ಭಟ್ ಅವರ ಸ್ಥಿರ ಚಿತ್ರ ಧರ್ಮ ದೈವಕ್ಕಿದೆ.


ಇದೀಗ ಟಾಕೀಸ್ ಯೂಟ್ಯೂಬ್ ಮೂಲಕ ಲಕ್ಷ ವೀಕ್ಷಕರನ್ನು ತಲಪಿದ ಸಂಭ್ರಮದ ಆಚರಣೆಗಾಗಿ ಚಿತ್ರ ತಂಡ ಸಜ್ಜಾಗಿದೆ. ಈ ಕಿರುಚಿತ್ರದ ಮೂಲಕ ನೀನಾಸಂ ಹಿನ್ನಲೆ ಹೊಂದಿರುವ ಯುವ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಮುನ್ನೆಲೆಗೆ ಬಂದಿದ್ದು ಅವರಿಂದ ಚಿತ್ರ ರಸಿಕರು ಬಹಳಷ್ಟನ್ನು ನಿರೀಕ್ಷಿಸುವಂತಾಗಿದೆ.


Key Words: Tulu Movies, Tulu Cinema, Coastalwood, Dharma Daiva, ತುಳು ಸಿನಿಮಾ, ಕೋಸ್ಟಲ್‌ವುಡ್, ಧರ್ಮದೈವ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post