ಬೆಳಗುತ್ತಿ: ತನ್ನ ಪ್ರೀತಿಯ ಹೋರಿಯ ಹುಟ್ಟುಹಬ್ಬವನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಆಚರಿಸಿದ್ದಾರೆ.
ಮಂಜುನಾಥ್ ಎಂಬ ಯುವಕ ತನ್ನ ಪ್ರೀತಿಯ ಹೋರಿ ತೀರ್ಥಗಿರಿ ಡಾನ್ಹೋರಿಯಾ ಹುಟ್ಟುಹಬ್ಬವನ್ನು ಶಾಸಕರ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಸೋಮವಾರ ಆಚರಣೆ ಮಾಡಿದರು.
ಕಳೆದ 14 ವರ್ಷದಿಂದ ಹೋರಿ ಬೆದರಿಸುವ ಹಬ್ಬದಲ್ಲಿ ಈ ಹೋರಿಯನ್ನು ಯಾರಿಂದಲೂ ಹಿಡಿಯಲು ಆಗಿಲ್ಲ. ಕೊರಳಿಗೆ ಕಟ್ಟಿದ ಕೊಬ್ಬರಿಯನ್ನೂ ಯಾರಿಗೂ ಕೀಳಲು ಸಾಧ್ಯವಾಗಿಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದರು ಗ್ರಾಮಸ್ಥರು.
ಹೋರಿ ಸಾಕುವುದನ್ನು ಹವ್ಯಾಸ ಮಾಡಿಕೊಂಡಿರುವ ಮಂಜುನಾಥ್ ಅವರು ಹೋರಿಗೆ ಹಾಲು, ಹುರುಳಿ, ಮೊಟ್ಟೆ ಸೇರಿ ವಿವಿಧ ಆಹಾರಗಳನ್ನು ಪ್ರತಿನಿತ್ಯ ನೀಡುವ ಮೂಲಕ ಅತ್ಯಂತ ಪ್ರೀತಿಯಿಂದ ಸಾಕಿದ್ದಾರೆ.
ಈಗಾಗಲೇ ಹೋರಿಯು ಸಾಕಷ್ಟು ಬಹುಮಾನ ತಂದು ಕೊಟ್ಟಿದೆ ಎನ್ನುತ್ತಾರೆ ಸ್ಥಳೀಯರು.
Post a Comment