ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಕಾರಣ ಬೆಳಗಾವಿಯ ಗಡಿ ಭಾಗಗಳಲ್ಲಿನ ಚೆಕ್ಪೋಸ್ಟ್ಗಳನ್ನು ಬಿಗಿಗೊಳಿಸಲಾಗಿದೆ.
ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ನೆಗಟಿವ್ ವರದಿ ಕಡ್ಡಾಯವಾಗಿದೆ. ಹೀಗಾಗಿ ನೆಗಟಿವ್ ವರದಿ ಇಲ್ಲದ ಪ್ರಯಾಣಿಕರಿರುವ ಬಸ್ಗಳನ್ನು ಪೊಲೀಸರು ವಾಪಾಸ್ ಕಳುಹಿಸಿದ್ದಾರೆ.
ಮುಂಬೈ ಹಾಗೂ ಪುಣೆಯಿಂದ ಬಂದ ಬಸ್ಗಳನ್ನು ಕೂಗನ್ನೊಳ್ಳಿ ಮತ್ತು ಕಾಗವಾಡ ಚೆಕ್ಟ್ಪೋಸ್ಟ್ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಪೊಲೀಸರು ಪ್ರತಿಯೊಬ್ಬ ಪ್ರಯಾಣಿಕರ ಕೋವಿಡ್ ನೆಗೆಟಿವ್ ವರದಿ ಪರಿಶೀಲನೆ ನಡೆಸುತ್ತಿದ್ದಾರೆ.
Post a Comment