ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 3 ತಿಂಗಳ ಮಗುವಿಗೆ ಚುಚ್ಚು ಮದ್ದು ನೀಡುವಲ್ಲಿ ಕೋವಿಡ್ ವ್ಯಾಕ್ಸಿನ್ ಕೊಟ್ಟು ಎಡವಟ್ಟು

3 ತಿಂಗಳ ಮಗುವಿಗೆ ಚುಚ್ಚು ಮದ್ದು ನೀಡುವಲ್ಲಿ ಕೋವಿಡ್ ವ್ಯಾಕ್ಸಿನ್ ಕೊಟ್ಟು ಎಡವಟ್ಟು

 


ಕೋಲಾರ ; ಮೂರು ತಿಂಗಳ ಚುಚ್ಚು ಮದ್ದು ಪಡೆದ ಹೆಣ್ಣು ಮಗು ಸಾವನ್ನಪ್ಪಿರುವ ಘಟನೆಯೊಂದು ಕೋಲಾರದಲ್ಲಿ ಜರುಗಿದೆ‌.


ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಮೂರು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದು, ಇದರಿಂದಾಗಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.


ಬೇವಹಳ್ಳಿ ಗ್ರಾಮದ ಅಂಜಲಿ ಹಾಗೂ ನಾಗರಾಜ್ ಎಂಬವರ ಮೂರು ತಿಂಗಳ ಹೆಣ್ಣು ಮಗು. ನಿನ್ನೆ ಬೇವಹಳ್ಳಿ ಗ್ರಾಮದಲ್ಲಿ ಕೊರೊನಾ ವ್ಯಾಕ್ಸಿನ್ ಜೊತೆಗೆ ಮೂರು ತಿಂಗಳ ಲಸಿಕೆಯನ್ನು ಹಾಕುವ ಕಾರ್ಯಕ್ರಮವನ್ನೂ ಕೂಡಾ ಹಮ್ಮಿಕೊಂಡಿದ್ದರು.


ಗ್ರಾಮದಲ್ಲಿ ಎಂಟು ಮಕ್ಕಳಿಗೆ ಚುಚ್ಚು ಮದ್ದು ನೀಡಿದ್ದಾರೆ. ಇದರಲ್ಲಿ 7 ಮಕ್ಕಳು ಆರೋಗ್ಯವಾಗಿದ್ದಾರೆ.  


ಮೂರು ತಿಂಗಳ ಚುಚ್ಚು ಮದ್ದು ಹಾಕುವ ವೇಳೆ ಮಗುವಿಗೆ ಕೊರೊನಾ ಲಸಿಕೆ ಹಾಕಿ ಯಡವಟ್ಟು ಮಾಡಲಾಗಿದೆ ಎಂದು ಪೋಷಕರು ಹಾಗೆ ಗ್ರಾಮಸ್ಥರು ಆರೋಪಿಸಿದ್ದು, ಅಧಿಕಾರಿಗಳ ವಿರುದ್ದ ರೊಚ್ಚಿ ಗೆದ್ದಿದ್ದಾರೆ.


ಈ ಬಗ್ಗೆ ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.,

0 Comments

Post a Comment

Post a Comment (0)

Previous Post Next Post