ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ: ಸುಷ್ಮಾ ಆರ್ ಗೌಡ ಮಚ್ಚಿನ

ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ: ಸುಷ್ಮಾ ಆರ್ ಗೌಡ ಮಚ್ಚಿನ

 ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯ ಮಕ್ಕಳಿಗಾಗಿ ವಿಶೇಷ ಅನ್‌ಲೈನ್‌ ಕಾರ್ಯಾಗಾರ


ಬೆಳ್ತಂಗಡಿ: ಜೀವನದಲ್ಲಿ ಸರಿಯಾದ ಗುರಿ ಉದ್ದೇಶ ಇಟ್ಟುಕೊಂಡು ಶಿಕ್ಷಣ ಮುಂದುವರಿಸಿದರೆ ಯಶಸ್ಸು ಸಾಧ್ಯ ಎಂದು ಯುವ ಚಿಂತನಾ ಫೌಂಡೇಶನ್ ಬೆಂಗಳೂರು ಇದರ ಸಿಆರ್‌ಪಿ ಸುಷ್ಮಾ ಆರ್ ಗೌಡ ಅವರು ಹೇಳಿದರು.  


ಬೆಳ್ತಂಗಡಿ ಮಚ್ಚಿನದಲ್ಲಿರುವ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಆಯೋಜಿಸಿದ 'ಎಸ್ ಎಸ್ ಎಲ್ ಸಿ ನಂತರ ಮುಂದೇನು? ಎಂಬ  ಆನ್ ಲೈನ್ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಯಾವ ವಿಷಯವನ್ನು ಕೂಡ ಸಮಾನವಾಗಿ ಕಂಡು ಓದಿದರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಅವರು ನುಡಿದರು. 


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮನಃಶಾಸ್ತ್ರಜ್ಞರಾದ ಸುಶ್ಮಿತಾ ಬಿ ಆರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯ ವನ್ನು ಗಮನಿಸಿಕೊಟ್ಟುಕೊಂಡು ವಿಷಯವನ್ನು ಆಯ್ದುಕೊಳ್ಳಿ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಶಾಲೆ ಪ್ರಾಂಶುಪಾಲರಾದ  ಗಣೇಶ್ ನಾಯ್ಕ್ ಮಾತನಾಡಿ,  ವಿದ್ಯಾರ್ಥಿಗಳು ತಮ್ಮ ಅಂಕದ ಆಧಾರದ ಮೇಲೆ ನಮ್ಮ ಗುರಿ ನಿರ್ಧರಿಸಬಾರದು. ಎಲ್ಲಿ‌ ಹೆಚ್ಚು ಅವಕಾಶ ಇದೆ ಅದನ್ನು ‌ಸರಿಯಾಗಿ ಬಳಸಿಕೊಂಡು ಶಿಕ್ಷಣವನ್ನು ಮುಂದುವರಿಸಬೇಕು ಹೇಳಿದರು. 


ಕಾರ್ಯಕ್ರಮದಲ್ಲಿ ಶಿಕ್ಷಕರಾದ ಖಾಲಿದ್ ಉಪಸ್ಥಿತರಿದ್ದರು. ಶಿಕ್ಷಕ ಶ್ರೀಕಾಂತ್ ಪೂಜಾರಿ ಬಿರಾವು ಕಾರ್ಯಕ್ರಮ ನಿರೂಪಿಸಿದರು.

Key words: SSLC, What next after class 10th, 10ನೇ ತರಗತಿ, ಎಸ್ಸೆಸ್ಎಲ್ಸಿ ಮುಂದೇನು?


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post