ಮಂಗಳೂರು: ತಾಲೂಕು ಚುಟುಕು ಪರಿಷತ್ತಿನ ವತಿಯಿಂದ ಆನ್ಲೈನ್ ವಿಡಿಯೋ ಕವಿಗೋಷ್ಠಿ ಸರಣಿಯ 13ನೇ ಕಾರ್ಯಕ್ರಮವಾಗಿ 'ಹಾಸ್ಯ ಚುಟುಕು' ಕವಿಗೋಷ್ಠಿಯನ್ನು ಆಯೋಜಿಸಿದೆ.
ಆಸಕ್ತ ಕವಿಗಳು ತಮ್ಮ ಸ್ವರಚಿತ ನಾಲ್ಕು ಸಾಲುಗಳ ಒಂದು ಹಾಸ್ಯ ಚಟುಕ ಅಥವಾ ಡುಂಡಿರಾಜ್ ಚುಟುಕು ಮಾದರಿಯ ಎರಡು ಹನಿಗವನವನ್ನು ಅಥವಾ ತಮ್ಮದೇ ಮಾದರಿಯ ಹಾಸ್ಯ ಪಂಚ್ ಉಳ್ಳ ಎರಡು ಹನಿಗವನ (ಒಂದು ಹನಿಗವನ ಗರಿಷ್ಠ 8 ಪದಗಳು)ಗಳನ್ನು ವಿಡಿಯೋ ಮಾಡಿ ಕಳಿಸಿಕೊಡಬಹುದು. ವೀಡಿಯೋದ ಆರಂಭದಲ್ಲಿ ತಮ್ಮ ಹೆಸರು, ಊರು, ಯಾವ ಜಿಲ್ಲೆಯವರೆಂದು ತಿಳಿಸಬೇಕು. ವೀಡಿಯೊ 80 ಸೆಕೆಂಡ್ಸ್ ಮಿತಿಯಲ್ಲಿರಬೇಕು. ತಮ್ಮ ಹಾಸ್ಯ ಚುಟುಕು/ಹನಿಗವನ ವಾಚನದ ವಿಡಿಯೋವನ್ನು 9108425813 ಕ್ಕೆ ವಾಟ್ಸಾಪ್ ಮೂಲಕ ಕಳೂಹಿಸಿಕೊಡಲು ಕೋರಲಾಗಿದೆ.
ಉತ್ತಮ ಗುಣಮಟ್ಟದ ವಿಡಿಯೋ ಕಳಿಸಬೇಕು.ಮೊಬೈಲನ್ನು ಅಡ್ಡವಾಗಿ (Horizontal) ಹಿಡಿದು, ಸಾಕಷ್ಟು ಬೆಳಕು ಇರುವಲ್ಲಿ, ಈಯರ್ ಫೋನ್ ಬಳಸಿ ಒಳಾಂಗಣದಲ್ಲಿ ವಿಡಿಯೋ ಚಿತ್ರೀಕರಿಸಬೇಕು. ವೀಡಿಯೋವನ್ನು ಕಳುಹಿಸಲು ಕೊನೆಯ ದಿನಾಂಕ ಜೂನ್ 28,2021. ಕರೆ ಮಾಡಲು ಅವಕಾಶ ಇರುವುದಿಲ್ಲ.
ಕಳುಹಿಸಿಕೊಡುವ ಚುಟುಕ/ಹನಿಗವನ ಈ ಹಿಂದೆ ಸಾಮಾಜಿಕ ಜಾಲತಾಣ, ವಾಟ್ಸಾಪ್ ಬಳಗ,ಪತ್ರಿಕೆ ಅಥವಾ ಟೀವಿ ಮೊದಲಾದುವುಗಳಲ್ಲಿ ಪ್ರಕಟ/ಪ್ರಸಾರವಾಗಿರಬಾರದು ಮತ್ತು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರಬಾರದು. ಗೋಷ್ಠಿಯು ಮುಂದೆ ಟೀವಿ ವಾಹಿನಿಯಲ್ಲಿ ಪ್ರಸಾರವಾಗಲಿದ್ದು ಅತ್ಯುತ್ತಮ ಗುಣಮಟ್ಟದ ಚುಟುಕುಗಳ ವೀಡಿಯೋಗಳನ್ನಷ್ಟೇ ಪ್ರಸಾರಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment