ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ಮುಖ್ಯ ರಸ್ತೆ ನಡುವಿನ ಬಾಜಾ೯ರ್ ತಿರುವು ಬಳಿ ರಸ್ತೆ ಮತ್ತು ಚರಂಡಿ ನೀರು ಇಲ್ಲಿನ ಹಲವು ಗದ್ದೆಗೆ ಹರಿಯುತ್ತಿತ್ತು. ಇದರಿಂದಾಗಿ ಕಳೆದ ನಾಲ್ಕೈದು ವಷ೯ಗಳಿಂದ ಹಡಿಲುಬಿದ್ದ ಗದ್ದೆಯಲ್ಲಿ ಭತ್ತದ ಕೖಷಿ ಮಾಡಲು ಸ್ಥಳೀಯ ರೈತರು ಈ ವಷ೯ ಮುಂದೆ ಬಂದಿದ್ದಾರೆ.
ಭಾರೀ ತಿರುವು ಮತ್ತು ಕಿರಿದಾದ ರಸ್ತೆಯಲ್ಲೇ ಮಳೆ ನೀರು ಹರಿದು ಹಲವು ಬಾರಿ ವಾಹನ ಅಪಘಾತಕ್ಕೂ ಕಾರಣವಾಗಿತ್ತು. ಇದರಿಂದಾಗಿ ಇಲ್ಲಿನ ನಾಗರಿಕರ ಹಲವು ವಷ೯ಗಳ ಬೇಡಿಕೆಯಾಗಿದ್ದ ಮೋರಿ ಅಳವಡಿಕೆ ಮತ್ತು ರಸ್ತೆ ವಿಸ್ತರಣೆಗೊಳಿಸುವ ಕಾಮಗಾರಿಗೆ ಶುಕ್ರವಾರ ಚಾಲನೆ ದೊರೆತಿದೆ.
ರಾಯಿ ಗ್ರಾ.ಪಂ.ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಸದಸ್ಯ ಸಂತೋಷ್ ಕುಮಾರ್ ಬೆಟ್ಟು, ಪಿಡಿಒ ಮಧು, ಎಂಜಿನಿಯರ್ ಅರುಣ್ ಪ್ರಕಾಶ್, ಗುತ್ತಿಗೆಗಾರ ವಳಚ್ಚಿಲ್ ಖಾದರ್ ಮತ್ತಿತರರು ಇದ್ದರು.
19ರಂದು (ನಾಳೆ) ಬೆಳಿಗ್ಗೆ ಗಂಟೆ 10 ರಿಂದ ಸಂಜೆ 4 ಗಂಟೆ ತನಕ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಪಯಾ೯ಯ ರಸ್ತೆ: ಮೂಡುಬಿದ್ರೆ-ಸಿದ್ಧಕಟ್ಟೆಯಿಂದ ಬರುವ ವಾಹನಗಳು ಕಪೆ೯ -ಅಣ್ಣಳಿಕೆ ಮಾಗ೯ವಾಗಿ ಸಂಚರಿಸುವುದು. ವಾಮದಪದವು ಕಡೆಯಿಂದ ಬರುವ ವಾಹನಗಳು ಕರಿಮಲೆ-ಅಣ್ಣಳಿಕೆ ಮಾಗ೯ ಬಳಸಬಹುದು. ಬಂಟ್ವಾಳ ಕಡೆಯಿಂದ ಬರುವ ವಾಹನಗಳು ಅಣ್ಣಳಿಕೆ- ಕಪೆ೯ ಮತ್ತು ಅಣ್ಣಳಿಕೆ- ಕರಿಮಲೆ ರಸ್ತೆ ಬಳಸುವಂತೆ ಸೂಚಿಸಲಾಗಿದೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment