ಕಲಬುರಗಿ: ಹಲವಾರು ಸಮಸ್ಯೆಗಳಲ್ಲಿ ಇದೊಂದು ಸಮಸ್ಯೆಯಾಗಿದ್ದು, ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದು ಇದರಿಂದ ಮನ ನೊಂದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಗರದ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದೆ.
21 ವರ್ಷದ ರಚಿತಾ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಕಳೆದ ಎರಡೂವರೆ ವರ್ಷದ ಹಿಂದೆಯಷ್ಟೇ ವೀರಣ್ಣ ಎಂಬುವರ ಜೊತೆ ರಚಿತಾ ಮದುವೆಯಾಗಿತ್ತು.
ಸಿವಿಲ್ ಇಂಜಿನಿಯರ್ ಆಗಿರುವ ವೀರಣ್ಣ, ಮದುವೆ ಬಳಿಕ ಹಣಕ್ಕಾಗಿ ಪೀಡಿಸಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ. ಮಂಗಳವಾರ ನಿನ್ನೆಯ ದಿನ ಕೂಡ ಹಣ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡಿ, ಗಲಾಟೆ ಮಾಡಿದ್ದ.
ಈ ಕಾರಣದಿಂದ ಬೇಸತ್ತು ಮನೆಯಲ್ಲೇ ರಚಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಚಿತಾ ರವರ ಆತ್ಮಹತ್ಯೆಯ ಬಗ್ಗೆ ಪತಿ ವೀರಣ್ಣ, ಮಾವ ಚಂದ್ರಕಾಂತ, ಅತ್ತೆ ಲಕ್ಷ್ಮಿಬಾಯಿ, ಮೈದುನ ಪವನ್ ಇವರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೀಗ ನಾಲ್ಕು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
إرسال تعليق