ಮೈಸೂರು : ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.
ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ ಎಸ್. ಕಾರ್ತಿಕ್ (30) ವರ್ಷದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಂದೆ, ತಾಯಿ ಕಳೆದುಕೊಂಡು ಮನನೊಂದಿದ್ದ ಕಾರ್ತಿಕ್, ಈ ಹಿಂದೆಯೂ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದರು. ಈಗ ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಮೃತಪಟ್ಟಿದ್ದಾರೆ.
ಕಾರ್ತಿಕ್, ಮೆಡಿಕಲ್ ರೆಪ್ರೆಂಸೆಂಟೇಟಿವ್ ಆಗಿ ಉದ್ಯೋಗದಲ್ಲಿದ್ದು , ಕಾರ್ತಿಕ್ ಅವರ ತಾಯಿ ಡಾ. ಪಾರ್ವತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ನಂತರ ತಂದೆ ಶಿವಲಿಂಗಯ್ಯ ಮೃತಪಟ್ಟಿದ್ದರು.
ಹಾಗಾಗಿ ಚಿಕ್ಕಮ್ಮನ ಆಸರೆಯಲ್ಲಿ ಎನ್.ಆರ್. ಮೊಹಲ್ಲಾದಲ್ಲಿ ಬಾಡಿಗೆ ರೂಂನಲ್ಲಿ ಕಾರ್ತಿಕ್ ವಾಸವಿದ್ದರು.
ಈ ಬಗ್ಗೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق