ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೈಸೂರು; ಹುಟ್ಟು ಹಬ್ಬದ ದಿನವೇ ಯುವಕ ಆತ್ಮಹತ್ಯೆ

ಮೈಸೂರು; ಹುಟ್ಟು ಹಬ್ಬದ ದಿನವೇ ಯುವಕ ಆತ್ಮಹತ್ಯೆ

 


ಮೈಸೂರು : ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.


 ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ ಎಸ್​. ಕಾರ್ತಿಕ್ (30) ವರ್ಷದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ.


 ತಂದೆ, ತಾಯಿ ಕಳೆದುಕೊಂಡು ಮನನೊಂದಿದ್ದ ಕಾರ್ತಿಕ್, ಈ ಹಿಂದೆಯೂ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದರು. ಈಗ ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಮೃತಪಟ್ಟಿದ್ದಾರೆ. 


ಕಾರ್ತಿಕ್, ಮೆಡಿಕಲ್ ರೆಪ್ರೆಂಸೆಂಟೇಟಿವ್ ಆಗಿ ಉದ್ಯೋಗದಲ್ಲಿದ್ದು , ಕಾರ್ತಿಕ್ ಅವರ ತಾಯಿ ಡಾ. ಪಾರ್ವತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ನಂತರ ತಂದೆ ಶಿವಲಿಂಗಯ್ಯ ಮೃತಪಟ್ಟಿದ್ದರು. 


ಹಾಗಾಗಿ ಚಿಕ್ಕಮ್ಮನ ಆಸರೆಯಲ್ಲಿ ಎನ್.ಆರ್. ಮೊಹಲ್ಲಾದಲ್ಲಿ ಬಾಡಿಗೆ ರೂಂನಲ್ಲಿ ಕಾರ್ತಿಕ್ ವಾಸವಿದ್ದರು.


ಈ ಬಗ್ಗೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



0 Comments

Post a Comment

Post a Comment (0)

Previous Post Next Post