ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆರಿಯ: ಸಿಯೋನ್ ಆಶ್ರಮದ ಗೋವುಗಳ ಪಾಲನೆಗೆ ಮುಂದಾದ ವಿಹಿಂಪ, ಬಜರಂಗದಳ ಗ್ರಾಮ ಸಮಿತಿ

ನೆರಿಯ: ಸಿಯೋನ್ ಆಶ್ರಮದ ಗೋವುಗಳ ಪಾಲನೆಗೆ ಮುಂದಾದ ವಿಹಿಂಪ, ಬಜರಂಗದಳ ಗ್ರಾಮ ಸಮಿತಿ



ನೆರಿಯ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಸಿಯೋನ್ ಆಶ್ರಮದಲ್ಲಿದ್ದ ಇನ್ನೂರಕ್ಕೂ ಅಧಿಕ ಆಶ್ರಮವಾಸಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಅವರನ್ನೆಲ್ಲ ಕೋವಿಡ್ ಕೇರ್ ಸೆಂಟರಿಗೆ ಸ್ಥಳಾಂತರಿಸಲಾಗಿದೆ.

ಪರಿಣಾಮ ಆಶ್ರಮದ ಗೋಶಾಲೆಯಲ್ಲಿದ್ದ 80ಕ್ಕೂ ಅಧಿಕ ಗೋವುಗಳು ಪಾಲಕರಿಲ್ಲದ ಅನಾಥವಾಗಿದ್ದು, ಗೋ ಶಾಲೆಯ ನಿರ್ವಹಣೆ ಕಷ್ಟ ಸಾಧ್ಯವಾಗಿ ಪರಿಣಮಿಸಿದೆ.

ಆದರೆ ಇದೀಗ ಈ ಸಮಸ್ಯೆಗೆ ಕಳೆಂಜದ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್, ವಿಶ್ವ ಹಿಂದೂ ಪರಿಷತ್, ನೆರಿಯ ಬಜರಂಗದಳ ಗ್ರಾಮ ಸಮಿತಿ ಸ್ಪಂದಿಸಿದ್ದು, ಗೋವುಗಳ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದೆ.

ಈ ಹಿನ್ನಲೆಯಲ್ಲಿ ಜೂ.2ರಂದು ಬಜರಂಗದಳ ರಾಜ್ಯ ಸಹ ಸಂಯೋಜಕ ಮುರಳಿಕೃಷ್ಣ ಹಂಸತ್ತಡ್ಕ ಸಿಯೋನ್ ಆಶ್ರಮಕ್ಕೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟಿನ ಅಧ್ಯಕ್ಷ ಯುತ ಡಾ| ಎಂ. ಎಂ. ದಯಾಕರ್ , ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರು ಹಾಗೂ ಟ್ರಸ್ಟಿನ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತರು, ವಿ.ಹಿಂ.ಪ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ್ ಧರ್ಮಸ್ಥಳ, ಹಾಗೂ ಪ್ರಮುಖರಾದ ನವೀನ್ ನೆರಿಯಾ, ಸಂತೋಷ್ ಅತ್ತಾಜೆ, ಮೋಹನ್ ಬೆಳ್ತಂಗಡಿ, ನೆರಿಯ ಗ್ರಾಮ ಸಮಿತಿ ಅಧ್ಯಕ್ಷ ಸತೀಶ್ ಕುಳೆನಾಡಿ, ದೀಕ್ಷಿತ್ ಬಯಲು, ನೆರಿಯ ಗ್ರಾ.ಪಂ. ಸದಸ್ಯ ಸಚಿನ್ ನೆರಿಯಾ, ವಿಶ್ವನಾಥ್ ಅಣಿಯೂರು, ನಂದಗೋಕುಲ ಗೋಶಾಲ ನಿರ್ವಹಣಾ ಸಮಿತಿಯ ಸಂಯೋಜಕ ವಿ. ಹರೀಶ್ ನೆರಿಯ ಉಪಸ್ಥಿತರಿದ್ದರು

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم