ಪದ್ಮುಂಜ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಹಾಗೂ ಕಣಿಯೂರು ಬಂದಾರು ಮೊಗ್ರು ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಇದೇ ವೇಳೆ ಆಶಾ ಕಾರ್ಯಕರ್ತೆಯರಿಗೆ ತಲಾ 2 ಸಾವಿರ ಗೌರವಧನ ನೀಡಲಾಯಿತು. ಹಾಗೇ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಯೋಗಶಾಲಾ ಕಿಟ್ ಹಾಗೂ ಇಂಜೆಕ್ಷನ್ ಗಳ ಸಂಗ್ರಹಕ್ಕಾಗಿ ತುರ್ತು ಅಗತ್ಯವಿದ್ದ ಡೊಮೇಸ್ಟಿಕ್ ರೆಫ್ರಿಜರೆಟರ್ ಕೊಡುಗೆಯಾಗಿ ನೀಡಲಾಯಿತು
ಈ ಸಂದರ್ಭದಲ್ಲಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷ ಅಶೋಕ್ ಪಾಂಜಾಳ, ಜಿ.ಪಂ. ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ್, ಮಾಜಿ ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್ಯ, ಅಮಿತಾ ಕುಶಾಲಪ್ಪ ಗೌಡ, ಕಣಿಯೂರು ಗ್ರಾ.ಪಂ.ಅಧ್ಯಕ್ಷ ಗಾಯತ್ರಿ ಗೋಪಾಲ ಗೌಡ, ಉಪಾಧ್ಯಕ್ಷ ಸುನಿಲ್ ಸಾಲಿಯಾನ್, ಬಂದಾರು ಗ್ರಾ.ಪಂ.ಅಧ್ಯಕ್ಷ ಪರಮೇಶ್ವರಿ ಜನಾರ್ದನ ಗೌಡ, ಗ್ರಾ.ಪಂ.ಸದಸ್ಯ ದಿನೇಶ್ ಗೌಡ ಖಂಡಿಗ, ಮುಖ್ಯಕಾರ್ಯನಿರ್ವಹಣಾಧಿಕಾರಿ ಉಮೇಶ್ ಪದ್ದಿಲ್ಲಾಯ, ಶಾರದಾ ರೈ, ನಿರ್ದೇಶಕ ಉದಯ್ ಬಿ.ಕೆ, ರಾಜೀವ್ ರೈ. ನಾರಾಯಣ ಗೌಡ, ಶಿಲಾವತಿ ಬಾಬು ಗೌಡ, ರಾಮಣ್ಣ ಸಾಲಿಯಾನ್, ದಿನೇಶ್ ನಾಯ್ಕ್ ಮೈಪಾಜೆ, ಕೇಶವ ಪೂಜಾರಿ ಉಪಸ್ಥಿತರಿದ್ದರು.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ

إرسال تعليق