ಉಜಿರೆ: ಇಲ್ಲಿನ ಸಂತ ಅಂತೋನಿ ಚರ್ಚ್ ಮತ್ತು ಮಂಗಳೂರು ಎಲೋಷಿಯಸ್ ಕಾಲೇಜು ಸಹಯೋಗದಲ್ಲಿ ಉಜಿರೆ ಚರ್ಚ್ ವ್ಯಾಪ್ತಿಯ ಬಡ ಕುಟುಂಬಗಳಿಗೆ ಜೂ.9ರಂದು ಚರ್ಚ್ ವಠಾರದಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಕೋವಿಡ್ ಲಾಕ್‌ಡೌನ್‌ನಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಬಡ ಕುಟುಂಬಗಳಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಕಿಟ್ ವಿತರಣೆ ಮಾಡಲಾಗಿದ್ದು, 40 ಬಡ ಕುಟುಂಬಗಳಿಗೆ ಆಹಾರ ಕಿಟ್ ನೀಡಲಾಯಿತು.
ಈ ಸಂದರ್ಭದಲ್ಲಿ ಉಜಿರೆ ಸಂತ ಅಂತೋನಿ ಚರ್ಚ್ನ ಧರ್ಮಗುರುಗಳಾದ ವಂ.ಫಾ| ಜೇಮ್ಸ್ಸ್ ಡಿ’ಸೋಜ, ಮಂಗಳೂರು ಎಲೋಷಿಯಸ್ ಕಾಲೇಜಿನ ನಿರ್ದೇಶಕರು ವಂ,ಫಾ| ಮೆಲ್ವಿನ್ ಪಿಂಟೊ, ವಂ,ಫಾ ಸಿರಿಲ್ ಡಿ’ಮೆಲ್ಲೋ, ವಂ.ಫಾ| ರೋಯ್‌ಸ್ಟಾನ್ ಮಾಡ್ತಾ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಂಟಿನಿ ಫೆರ್ನಾಂಡಿಸ್, ಉಪಾಧ್ಯಕ್ಷ ನಿತಿನ್ ಮೊನೀಸ್, ವಾಳೆಯ ಗುರಿ ಪಾಲೆಯ ಸಂತ್ರಸ್ಥರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
إرسال تعليق