ಉಜಿರೆ: ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ ನವದೆಹಲಿ ವತಿಯಿಂದ ನಡೆಯುವ (ಎನ್.ಸಿ.ವಿ.ಟಿ) 2019-20ನೇ ಸಾಲಿನ ವಿದ್ಯಾರ್ಥಿನಿಯರ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಎಸ್.ಡಿ.ಎಂ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆಗೆ ಶೇ. ನೂರು ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (ಕೋಪಾ) ವೃತ್ತಿಯಲ್ಲಿ ಹಾಜರಾದ 20 ವಿದ್ಯಾರ್ಥಿನಿಯರು ಹಾಗೂ ಸೀವಿಂಗ್ ಟೆಕ್ನಾಲಜಿ ವೃತ್ತಿ ವಿಭಾಗದ 11 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿನಿಯರು ಉತ್ತೀರ್ಣರಾಗಿರುತ್ತಾರೆ.
ಕೋಟಾ ವೃತ್ತಿಯಲ್ಲಿ ಕು.ಯೋಗಿತಾ 523/600 ಹಾಗೂ ಸೀವಿಂಗ್ ಟೆಕ್ನಾಲಜಿ ವೃತ್ತಿಯಲ್ಲಿ ಕು.ದರ್ಶಿನಿ 515/600 ಅಂಕವನ್ನು ಪಡೆದು ಪ್ರಥಮ ಸ್ಥಾನವನ್ನು ಪಡೆದು ಕೊಂಡಿದ್ದಾರೆ.
(ಉಪಯುಕ್ತ ನ್ಯೂಸ್)
إرسال تعليق