ಮೈಸೂರು: ಸುಧರ್ಮಾ ಪತ್ರಿಕೆ ಸಂಪಾದಕರಾದ ಕೆ.ವಿ. ಸಂಪತ್ ಕುಮಾರ್ (64) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸುಧರ್ಮಾ ಪತ್ರಿಕೆ ವಿಶ್ವದ ಏಕೈಕ ಸಂಸ್ಕೃತ ದೈನಿಕವಾಗಿದ್ದು, ಕಳೆದ ನಾಲ್ಕು ದಶಕಗಳಿಂದ ಸುಧರ್ಮಾ ಪತ್ರಿಕೆಯನ್ನು ಮುನ್ನಡೆಸುತ್ತಾ ಬಂದಿದ್ದರು.
ಈ ಮೂಲಕ ಸಂಸ್ಕೃತ ಭಾಷೆಯ ಉಳಿವಿಗೆ ಶ್ರಮ ಪಟ್ಟವರು. ಸಂಸ್ಕೃತ ಸೇವೆ ಗುರುತಿಸಿ ಕೇಂದ್ರ ಸರ್ಕಾರವು ಇವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು.
ಮಧ್ಯಾಹ್ನ ತಮ್ಮ ಕಚೇರಿಯಲ್ಲಿ ಸಂಸ್ಕೃತ ಪತ್ರಿಕೆಯ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ನಿಧನರಾದರು.
إرسال تعليق