ವಿಜಯನಗರ: ನಿವೃತ್ತಿ ಹೊಂದಬೇಕಾಗಿದ್ದ ದಿನವೇ ಪಿಎಸ್‌ಐಯೊಬ್ಬರು ಕೋವಿಡ್ ಸೋಂಕಿಗೆ ಬಲಿಯಾದ ಘಟನೆಯೊಂದು ಹೊಸಪೇಟೆಯಲ್ಲಿ ನಡೆದಿದೆ.
ಯಲ್ಲಪ್ಪ ಕದ್ರಳ್ಳಿ (60) ವರ್ಷ ಕೋವಿಡ್ ನಿಂದ ಮೃತಪಟ್ಟ ಪಿಎಸ್‌ಐ. ಇವರು ಇಂದು ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಕಳೆದ 15 ದಿನಗಳಿಂದ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊಪ್ಪಳದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಯಲ್ಲಪ್ಪ ಕದ್ರಳ್ಳಿ ಕಳೆದ 38 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐಯಾಗಿ ಕರ್ತವ್ಯದಲ್ಲಿದ್ದರು.
إرسال تعليق