ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಾಸಕ ಡಾ.ಭರತ್ ಶೆಟ್ಟಿ ವಿಶೇಷ ಪ್ರಯತ್ನ; ಲೋಕೇಶ್ ಕುಂದರ್ ಕುಟುಂಬಕ್ಕೆ 6 ಲಕ್ಷ ಪರಿಹಾರ

ಶಾಸಕ ಡಾ.ಭರತ್ ಶೆಟ್ಟಿ ವಿಶೇಷ ಪ್ರಯತ್ನ; ಲೋಕೇಶ್ ಕುಂದರ್ ಕುಟುಂಬಕ್ಕೆ 6 ಲಕ್ಷ ಪರಿಹಾರ


ಮಂಗಳೂರು: ನಗರ ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಇಡ್ಯಾದ ಗುಡ್ಡೆಕೊಪ್ಲ ನಿವಾಸಿ ಲೋಕೇಶ್ ಕುಂದರ್ ಅವರು ಕಳೆದ ಡಿಸೆಂಬರ್ ನಲ್ಲಿ ಮನೆಯ ಬಳಿಯ ಸಮುದ್ರ ತೀರದಲ್ಲಿ ಸಾಂಪ್ರದಾಯಿಕವಾಗಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಟ್ಯೂಬ್ ಹತೋಟಿ ತಪ್ಪಿ ದೂರ ಸರಿದು ನೀರಿಗೆ ಹಾಕಿದ ಬಲೆ ಕಾಲಿಗೆ ಸಿಲುಕಿ ಈಜಾಡಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಆ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಮಾಡಿರುವ ವಿಶೇಷ ಪ್ರಯತ್ನದಿಂದ ಕರ್ನಾಟಕ ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಮೀನುಗಾರಿಕೆ ಮಾಡುವಾಗ ಮೃತಪಟ್ಟ ಮೀನುಗಾರರಿಗೆ ನೀಡುವ ಗರಿಷ್ಟ ಪರಿಹಾರ ಧನ ಆರು ಲಕ್ಷ ರೂಪಾಯಿಗಳನ್ನು ಮಂಜೂರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಶನಿವಾರ ಲೋಕೇಶ್ ಕುಂದರ್ ಅವರ ಮನೆಗೆ  ಶಾಸಕರು ಭೇಟಿ ನೀಡಿ ಅಲ್ಲಿ ಲೋಕೇಶ್ ಕುಂದರ್ ಅವರ ಪತ್ನಿ ಜ್ಯೋತಿ ಎಸ್ ಪುತ್ರನ್ ಅವರಿಗೆ ಪರಿಹಾರ ಮಂಜೂರಾತಿ ಪತ್ರ ಹಸ್ತಾಂತರಿಸಿ ಸಾಂತ್ವನ ಹೇಳಿದರು.

ಶಾಸಕರೊಂದಿಗೆ ಮನಾಪ ನಾಮನಿರ್ದೇಶಿತ ಸದಸ್ಯ ರಾಜೇಶ್ ಸಾಲ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾ ಡಾ ಸುಶ್ಮಿತಾ ರಾವ್, ಸಹಾಯಕ ನಿರ್ದೇಶಕರಾದ ದಿಲೀಪ್, ದಕ್ಷಿಣ ಕನ್ನಡ ಕರಾವಳಿ ಮೂಲ ಮೀನುಗಾರರ ಸಂಘದ ಅಧ್ಯಕ್ಷರಾದ ಅಶ್ವಥ್ ಕಾಂಚನ್ ಬೈಕಂಪಾಡಿ, ಸಂಘಟನ ಕಾರ್ಯದರ್ಶಿ ಚಂದ್ರಶೇಖರ ಶ್ರೀಯಾನ್ ಗುಡ್ಡೆಕೊಪ್ಲ. ದ, ಕ ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟ ಪೆಡೆರೇಷನ್ ನಿರ್ದೇಶಕರು ಸುಧೀರ್ ಶ್ರೀಯನ್ ಹಾಗೂ ಪಕ್ಷದ ಮಂಡಲ ಉಪಾಧ್ಯಕ್ಷರಾದ ವಿಠಲ ಸಾಲಿಯಾನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم