ಕಾರಡ್ಕ: 'ಪುನರ್ನವ' ಸಂಚಿಕೆಯ ಮೂಲಕ ಮಕ್ಕಳ ಪ್ರತಿಭಾ ಪ್ರದರ್ಶನವಾಗಿದೆ. ಇದರಲ್ಲಿ ಮಕ್ಕಳ ಕಥೆ, ಕವಿತೆ, ಪ್ರಬಂಧ ಮೊದಲಾದ ರಚನೆಗಳು ಒಳಗೊಂಡು ಬಹಳ ಚೆಲುವಾಗಿದೆ. ಅಧ್ಯಾಪಕರ ಕೆಲವು ರಚನೆಗಳು ಇನ್ನೂ ಹೆಚ್ಚು ಅರ್ಥಪೂರ್ಣವಾಗಿದೆ ಎಂದು ನಿವೃತ್ತ ಶಿಕ್ಷಕ ಕೃಷ್ಣೋಜಿ ರಾವ್ ಹೇಳಿದರು.
ಅವರು ಜಿ ವಿ ಎಚ್ ಎಸ್ ಎಸ್ ಕಾರಡ್ಕ ಶಾಲೆಯ ವಿದ್ಯಾರ್ಥಿಗಳ ಬರಹಗಳನ್ನೊಳಗೊಂಡ ಇ ಪುಸ್ತಕ ಪುನರ್ನವವನ್ನು ಔಪಚಾರಿಕವಾಗಿ ಬಿಡುಗಡೆಗೊಳಿಸಿ ಮಾತನಾಡಿದರು.
ಕಾರಡ್ಕ ಶಾಲೆಯ ವತಿಯಿಂದ ಗೂಗಲ್ ಮೀಟ್ ಮೂಲಕ ನಡೆಸಲಾದ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಕರುಣಾಕರ ಎಂ ವಹಿಸಿದ್ದರು.
ಶಿಕ್ಷಕರಾದ ಬೇಬಿರೇಖ ಹಾಗೂ ರಾಮಚಂದ್ರ ಕಯ್ಯಾರರ ಕವಿತೆಗಳನ್ನು ಹಾಡಿದರು. ವಿದ್ಯಾರ್ಥಿಗಳಾದ ಅನಘ ಮತ್ತು ಅನ್ವಿತ ಪ್ರಾರ್ಥನೆ ಹಾಡಿದರು. ಚೈತ್ರ ಕೆ ಎಸ್ ಕವಿ ಪರಿಚಯ ಮಾಡಿದರು. ವಿನ್ಯಾಸ್ ಸ್ವಾಗತಿಸಿ, ಪ್ರಜ್ಞಾ ಕೆ ವಂದಿಸಿದರು.
(ಉಪಯುಕ್ತ ನ್ಯೂಸ್)
إرسال تعليق