ಶಾಸಕ ಡಾ.ಭರತ್ ಶೆಟ್ಟಿ ಸ್ಥಳಕ್ಕೆ ಭೇಟಿ |
ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜತೆ ಮಾತುಕತೆ |
ವಾಹನ ಸವಾರರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಸೂಚನೆ
ಬೋಂದೆಲ್: ಪೆರ್ಲಗುರಿ ಪದವಿನಂಗಡಿ ಮುಖ್ಯ ರಸ್ತೆ (ವಿಮಾನ ನಿಲ್ದಾಣ ಕ್ಕೆ ಹೋಗುವ ರಸ್ತೆ) ಜಂಕ್ಷನ್ ನಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿದ್ದವು. ಅಲ್ಲಿ ವಾಹನ ಸವಾರರಿಗೆ ಆಗುತ್ತಿದ್ದ ತೊಂದರೆಯನ್ನು ಪರಿಹರಿಸಲು ಶಾಸಕ ವೈ.ಭರತ್ ಶೆಟ್ಟಿಯವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿಂದಲೇ ಶಾಸಕರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಸ್ಥಳೀಯ ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ಕ್ರಮಕೈಗೊಳ್ಳಲು ಸೂಚಿಸಿದರು.
ಮ.ನ.ಪಾ ಸದಸ್ಯೆಯರಾದ ಗಾಯತ್ರಿ ರಾವ್, ಸಂಗೀತ ನಾಯಕ್, ಟ್ರಾಫಿಕ್ ಪೊಲೀಸ್ ಅಧಿಕಾರಿಗಳಾದ ಎ ಸಿ.ಪಿ,ನಟರಾಜ್, ಇನ್ಸ್ಪೆಕ್ಟರ್ ಮೊಹಮದ್ ಶರೀಫ್, ಬಿಜೆಪಿ ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق