ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೊಬೈಲ್ ನೆಟ್ವರ್ಕ್ ಸಿಗುವುದಿಲ್ಲವೆಂದು ಮರವೇರಿದ ಬಾಲಕ ಸಿಡಿಲು ಬಡಿದು ಸಾವು

ಮೊಬೈಲ್ ನೆಟ್ವರ್ಕ್ ಸಿಗುವುದಿಲ್ಲವೆಂದು ಮರವೇರಿದ ಬಾಲಕ ಸಿಡಿಲು ಬಡಿದು ಸಾವು

 



ಮುಂಬಯಿ: ಮೊಬೈಲ್​ ನೆಟ್​ವರ್ಕ್​ ಸಿಗುವುದಿಲ್ಲ ಎನ್ನುವ ಕಾರಣದಿಂದ ಮರವನ್ನು ಹತ್ತಿದ 15 ವರ್ಷದ ಬಾಲಕನಿಗೆ ಸಿಡಿಲು ಬಡಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆಯೊಂದು ಮಹಾರಾಷ್ಟ್ರದ ಪಾಲ್ಘರ್​​ ಜಿಲ್ಲೆಯಲ್ಲಿ ನಡೆದಿದೆ.  


ಈ ದುರಂತದಲ್ಲಿ ಇನ್ನೂ ಮೂವರು ಬಾಲಕರು ಗಾಯಗೊಡಿದ್ದಾರೆ ಎನ್ನಲಾಗಿದೆ.


ಸೋಮವಾರ ಸಂಜೆ ವೇಳೆ ದಹನು ತಾಲೂಕಿನ ಮಂಕರ್​ಪಾಡ ಎಂಬಲ್ಲಿ ನಾಲ್ವರು ಬಾಲಕರು ಜಾನುವಾರುಗಳನ್ನು ಮೇಯಿಸಲು ಹೋಗಿದ್ದ ವೇಳೆಗೆ ಈ ದುರಂತ ಸಂಭವಿಸಿದೆ ಎಂದು ತಹಶೀಲ್ದಾರ್​ ರಾಹುಲ್​ ಸಾರಂಗ್​ ಹೇಳಿದ್ದಾರೆ.


ಮಹಾರಾಷ್ಟ್ರ ಜಿಲ್ಲೆಯಲ್ಲಿ ಸೋಮವಾರದಂದು ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ಈ  ಮಳೆಯಿಂದಾಗಿ ನೆಟ್​ವರ್ಕ್​ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಬಾಲಕ ಮೊಬೈಲ್​ ಹಿಡಿದು ಮರವೇರಿದ್ದ ಎನ್ನಲಾಗಿದೆ.


ಮೃತ ಬಾಲಕನನ್ನು 15 ವರ್ಷದ ರವೀಂದ್ರ ಕೋರ್ದಾ ಎಂದು ಗುರುತಿಸಲಾಗಿದೆ.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم