ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಲಪಾಡಿ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಭೇಟಿ

ತಲಪಾಡಿ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಭೇಟಿ

 



ಮಂಗಳೂರು : - ಕರ್ನಾಟಕ ಕೇರಳ ಗಡಿಯಿಂದ  ತಲಪಾಡಿ ಚೆಕ್ ಪೋಸ್ಟ್‍ನಲ್ಲಿ ಕೋವಿಡ್ ನೆಗೆಟಿವ್ ವರದಿ ಹೊಂದಿ ಪ್ರವೇಶಿಸುತ್ತಿರುವ ಬಗ್ಗೆ ನಡೆಯುತ್ತಿರುವ ತಪಾಸಣೆಯನ್ನು ಸೋಮವಾರ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಯವರು ಪರಿಶೀಲನೆ ನಡೆಸಿದರು.



ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್, ಉಪ ವಿಭಾಗಾಧಿಕಾರಿ ಮಧನ್ ಮೋಹನ್, ಸರ್ಕಲ್ ಇನ್ಸ್‍ಪೆಕ್ಟರ್ ಸಂದೀಪ್ ಸಬ್ ಇನ್ಸ್‍ಪೆಕ್ಟರ್ ಶಿವಕುಮಾರ್, ಕಂದಾಯ ಇಲಾಖೆಯ ಸಿಬ್ಬಂದಿಗಳು, ಪಿ.ಡಿ.ಓ ಹಾಗೂ ಮತ್ತಿತರರು ಉಪಸ್ಥಿತರಿದ್ದರು.



ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ರಾಜ್ಯ ಸರ್ಕಾರ ಪಕ್ಕದ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೋರೋನಾ ಸೋಂಕಿನ ಪ್ರಕರಣಗಳು ಹೆಚ್ಚು ಕಂಡು ಬರುತ್ತಿರುವ ಹಾಗೂ ಡೆಲ್ಟಾ ಪ್ಲಸ್  ವೈರಸ್ ಕಂಡು ಬರುತ್ತಿರುವ ಹಿನ್ನೆಲೆ ಗಡಿ ಭಾಗದಿಂದ ಜಿಲ್ಲೆಗೆ ಪ್ರವೇಶಿಸುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು ಎಂದು ಆದೇಶಿಸಿರುತ್ತಾರೆ ಈ ಹಿನ್ನಲೆ ಗಡಿ ಭಾಗದಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದರು.



ಜಿಲ್ಲೆಯ ಗಡಿ ಭಾಗವನ್ನು ಹೊಂದಿರುವ ಎಲ್ಲಾ ಚೆಕ್ ಪೋಸ್ಟ್‍ಗಳಲ್ಲಿ 24*7 ಪಾಳೆಯಲ್ಲಿ ಪೊಲೀಸ್, ಕಂದಾಯ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಗಡಿ ಮೂಲಕ ಪ್ರವೇಶಿಸುವವರ ಕೋವಿಡ್ ನೆಗೆಟಿವ್ ವರದಿಯನ್ನು ಚೆಕ್ ಪೊಸ್ಟ್‍ಗಳಲ್ಲಿ ತಪಾಸಣೆ ವೇಳೆಯಲ್ಲಿ ಪ್ರಯಾಣಿಕರನ್ನು  ಪರೀಕ್ಷಿಸಲಿದ್ದಾರೆ, ಜಿಲ್ಲೆಗೆ  ಪ್ರವೇಶಿಸುವ ಪ್ರತಿಯೊಬ್ಬ ಕೋವಿಡ್ ನೆಗೆಟಿವ್ ವರದಿಯನ್ನು  ಹೊಂದಿ ಪ್ರವೇಶಿಸುವುದು ಕಡ್ಡಾಯ ಎಂದರು.



ಜಿಲ್ಲೆಯ ಗಡಿ ಭಾಗವನ್ನು ಹೊಂದಿರುವ ಚೆಕ್ ಪೋಸ್ಟ್‍ಗಳಲ್ಲಿ ಪ್ರತೀ ದಿನ ಹೆಚ್ಚು ಜನರು ತಮ್ಮ ವೃತ್ತಿಯನ್ನರಸಿ ಮಂಗಳೂರು ನಗರಕ್ಕೆ ಬರುತ್ತಿದ್ದಾರೆ. ಇವರುಗಳ ಕೋವಿಡ್ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ಗಡಿಯ ಚೆಕ್ ಪೋಸ್ಟ್‍ನಲ್ಲಿಯೇ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದ ಅವರು ಅಲ್ಲದೇ ತುರ್ತು ಚಿಕಿತ್ಸೆಗೆ ಬರುತ್ತಿರುವವರನ್ನು ಸಹ ಇಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದರು.



ಚೆಕ್ ಪೋಸ್ಟ್‍ನಲ್ಲಿ ವಾಹನಗಳು ವೇಗವಾಗಿ ಬರುವ ಸಾಧ್ಯತೆ ಇರುವುದರಿಂದ ಬ್ಯಾರಿಕೇಟ್ ಅಳವಡಿಸಿ ವಾಹನಗಳ ತಪಾಸಣೆಯನ್ನು ಮಾಡಬೇಕು ಎಂದ ಅವರು ತಪಾಸಣೆ ಮಾಡುತ್ತಿರುವ ಬಗ್ಗೆ ಫಲಕವನ್ನು ಸ್ವಲ್ಪ ದೂರದಲ್ಲಿ ಅಳವಡಿಸಿರುವುದರಿಂದ ವಾಹನ ಚಾಲಕರಿಗೆ ನಿಧಾನವಾಗಿ ವಾಹನ ಚಲಾಯಿಸಲು ಅನುಕೂಲವಾಗಲಿದೆ. ಆಧ್ದರಿಂದ ಇದನ್ನು ಅಧಿಕಾರಿಗಳು ಅಳವಡಿಸಲು ಮುಂದಾಗಬೇಕು ಎಂದರು.   



ಚೆಕ್ ಪೋಸ್ಟ್‍ನಲ್ಲಿ ಹೆಚ್ಚಿನ ಪೊಲೀಸ್, ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸುವಂತೆ ತಿಳಿಸಿದೆ ಎಂದ ಅವರು ಜಿಲ್ಲೆಯಲ್ಲಿ ಗಡಿ ಭಾಗದ ರಸ್ತೆಗಳಾದ ನೆಟ್ಟಣಿಕೆ ಮುಡ್ನೂರು, ಜಾಲ್ಸೂರು ಸಾರಡ್ಕ ಸೇರಿದಂತೆ ಮತ್ತಿತರ ಗಡಿಗಳಲ್ಲಿ ಹಾಗೂ ಕೇರಳದ ಗಡಿಯ ಗ್ರಾಮೀಣ ರಸ್ತೆಗಳಲ್ಲಿ ಹೆಚ್ಚು ಜನರು ಸಂಚರಿಸುವ ರಸ್ತೆಗಳಿಗೂ ಚೆಕ್ ಪೋಸ್ಟ್‍ಗಳನ್ನು ತೆರೆಯಲಾಗುವುದು ಎಂದರು. '

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم