ಬೆಂಗಳೂರು: ತಂದೆ ಹಾಗೂ ಮಲತಾಯಿ ಜೊತೆ ಸೇರಿಕೊಂಡು ಮೊದಲ ಹೆಂಡತಿ ಮಕ್ಕಳಿಗೆ ಚಿತ್ರಹಿಂಸೆ ನೀಡುತ್ತಿದ್ದ ಘಟನೆ ನಡೆದಿದೆ.
ತಮಿಳು ನಾಡು ಮೂಲದ ಸೆಲ್ವನ್ ಮತ್ತು ಸತ್ತಯಾ ದಂಪತಿ ಈ ರೀತಿಯ ವರ್ತನೆ ಮಾಡುತ್ತಿದ್ದು, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.
ಸೆಲ್ವನ್ ಮೊದಲ ಪತ್ನಿಗೆ ಮೂರು ಮಕ್ಕಳಿದ್ದು, ಕೆಲ ವರ್ಷಗಳ ಹಿಂದೆ ಆಕೆ ಮೃತಪಟ್ಟಿದ್ದರು. ಮತ್ತೆ ಎರಡನೇ ಮದುವೆಯಾಗಿದ್ದ ಸೆಲ್ವನ್ಗೆ ಮತ್ತೆರಡು ಮಕ್ಕಳು ಜನಿಸಿದ್ದರು.
ಇದೀಗ ಮಲತಾಯಿ ಹಾಗೂ ತಂದೆ ಸೆಲ್ವನ್ ಸೇರಿಕೊಂಡು ಮೊದಲ ಪತ್ನಿಯ ಪುಟಾಣಿ ಮಕ್ಕಳಿಗೆ ಚಿತ್ರಹಿಂಸೆ ನೀಡಲು ಆರಂಭಿಸಿದ್ದರು.
ಮಕ್ಕಳ ಕಾಲಿನ ಚರ್ಮ ಸುಲಿದು, ಬಿಸಿನೀರು ಎರಚಿ ಕೆಟ್ಟ ವಿಕೃತಿ ಮೆರೆದಿದ್ದಾರೆ.
ಬ್ಲೇಡ್, ಚಾಕು, ಸ್ಕ್ರೂಡ್ರೈವರ್ ,ಸುತ್ತಿಗೆಯಿಂದ ಮಕ್ಕಳ ಮೇಲೆ ಭಯಾನಕವಾಗಿ ಹಲ್ಲೆ ನಡೆಸಿದ್ದಾರೆ.
ಇದನ್ನೆಲ್ಲಾ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Post a Comment