ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭೋಪಾಲ್: ಪಾಪಿ ತಂದೆಯಿಂದಲೇ ಮಗಳಿಗೆ ಲೈಂಗಿಕ ದೌರ್ಜನ್ಯ

ಭೋಪಾಲ್: ಪಾಪಿ ತಂದೆಯಿಂದಲೇ ಮಗಳಿಗೆ ಲೈಂಗಿಕ ದೌರ್ಜನ್ಯ

 


ಭೋಪಾಲ್: 19 ವರ್ಷದ ಮಗಳ ಮೇಲೆ ಕಳೆದ ಮೂರು ವರ್ಷಗಳಿಂದ ಸತತವಾಗಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.


19 ವರ್ಷದ ಪುತ್ರಿ ಹಾಗೂ ಆಕೆಯ ತಾಯಿ ಆರೋಪಿ ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.


3 ವರ್ಷಗಳ ಹಿಂದೆ ಮೊದಲ ಬಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾನಭಂಗ ಮಾಡಿದಾಗ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದಳು. 


ಕೃತ್ಯವೆಸಗಿದ ಬಳಿಕ ಈ ವಿಚಾರ ಯಾರಿಗಾದರೂ ಹೇಳಿದರೆ ಸಹೋದರ ಮತ್ತು ತಾಯಿಯನ್ನು ಮನೆಯಿಂದ ಹೊರಹಾಕುವುದಾಗಿ ಆರೋಪಿ ಬೆದರಿಕೆ ಹಾಕಿದ್ದನು. 


ಆದರೆ ಈಗ ಆತನ ಕಿರುಕುಳ ಸಹಿಸಲಾರದ ಕಾರಣ ತಾಯಿಯ ಬಳಿ ಸಂತ್ರಸ್ತೆ ಕಷ್ಟ ಹೇಳಿಕೊಂಡಿದ್ದಳು. 


ಇದಾದ ಬಳಿಕ ಇಬ್ಬರೂ ಪೊಲೀಸರಿಗೆ ದೂರು ನೀಡಿದ್ದಾರೆ

0 Comments

Post a Comment

Post a Comment (0)

Previous Post Next Post