ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಲಿಷ್ಠ ಬಿಲ್ಲವೆರ್ ವಾಟ್ಸಾಪ್ ತಂಡದಿಂದ 22 ನೇ ಸೇವಾ ಯೋಜನೆ

ಬಲಿಷ್ಠ ಬಿಲ್ಲವೆರ್ ವಾಟ್ಸಾಪ್ ತಂಡದಿಂದ 22 ನೇ ಸೇವಾ ಯೋಜನೆ



ಬೆಳ್ತಂಗಡಿಯ ಓಡಿಲ್ನಾಳ ಗ್ರಾಮದ ಮೈರಲ್ಕೆ ನಿವಾಸಿ ಸುರೇಶ್ ಪೂಜಾರಿ (44 ವರ್ಷ)  ಇವರು ವೃತ್ತಿಯಲ್ಲಿ ಅಟೋಚಾಲಕರಾಗಿದ್ದು, ತೀರಾ ಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ. ಮನೆಯಲ್ಲಿ ಪತ್ನಿ ಮತ್ತು ಎರಡು ಹೆಣ್ಣು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದ ಇವರಿಗೆ ಈ ಕೊರೊನ ಎನ್ನುವ ಮಹಾ ಮಾರಿಯ ಲಾಕ್ ಡೌನ್ ಸಂದರ್ಭದಲ್ಲಿ ಅನಾರೋಗ್ಯಕ್ಕೆ (ಮಿದುಳಿನ ರಕ್ತಸ್ರಾವ) ಒಳಗಾಗಿದ್ದು "ಬಲಿಷ್ಠ ಬಿಲ್ಲವೆರ್" ವಾಟ್ಸಾಪ್ ತಂಡದ ದಾನಿಗಳ ಸಹಕಾರದಿಂದ ಇವರ ಚಿಕಿತ್ಸೆಗಾಗಿ 10,000 ರೂಪಾಯಿಗಳನ್ನು ಬೆಳ್ತಂಗಡಿಯ ಮಾಜಿ ಶಾಸಕರಾದ ವಸಂತ ಬಂಗೇರ ಅವರ ಮೂಲಕ ದಿನಾಂಕ 04/06/2021 ರಂದು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಲಿಷ್ಠ ಬಿಲ್ಲವೆರ್ ತಂಡದ ಮುಖ್ಯಸ್ಥರುಗಳಾದ ಸನತ್ ಅಂಚನ್, ಸಂಪತ್ ಅಂಚನ್ ಹಾಗೂ ಸದಸ್ಯರುಗಳಾದ ಸಂತೋಷ್ ಅಂಚನ್ ಹೇಮಂತ್ ಕೋಟ್ಯಾನ್  ರಾಜೇಶ್ ಪೂಜಾರಿ ಮದ್ದಡ್ಕ  ಸಂದೀಪ್ ಸುವರ್ಣ ಕುಕ್ಕೇಡಿ ತಿಲಕ್ ಕೋಟ್ಯಾನ್ ಮತ್ತು ಪ್ರಜ್ಞಾ ಓಡಿಲ್ನಾಳ ಜೊತೆಗಿದ್ದರು.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post