ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಸಂಘಟನೆ ನವ ಭಾರತ್ ಗೆಳೆಯರ ಬಳಗ ಕಲ್ಲಾಜೆ-ಇಂದಬೆಟ್ಟು ಇದರ ವತಿಯಿಂದ ಲಾಕ್ ಡೌನ್ ಸಮಯದಲ್ಲಿ ಧಾರ್ಮಿಕ ಸೇವಾ ಕಾರ್ಯಗಳು ನಡೆಯುತ್ತಿವೆ.
ಇಂದು ತಾಲೂಕಿನ ಗೋಶಾಲೆಗಳಾದ ಕಳೆಂಜದ 'ನಂದ ಗೋಕುಲ' ಗೋಶಾಲೆ (2 ಲೋಡ್ ಪಿಕಪ್) ಹಾಗೂ ಸೌತೆಡ್ಕ ಕ್ಷೇತ್ರದ ಕಾಮಧೇನು ಗೋಶಾಲೆಗೆ (1ಲೋಡ್ ಪಿಕಪ್) ಹಸಿ ಹುಲ್ಲನ್ನು ನೀಡಲಾಯಿತು. ಮತ್ಸ್ಯ ಕ್ಷೇತ್ರ ಶಿಶಿಲದ ಮತ್ಸ್ಯ ಗಳಿಗೆ ಆಹಾರವನ್ನು ನೀಡಲಾಯಿತು. ಸಂಘದ ಸದಸ್ಯರಿಂದ ಸೇವಾ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ನವ ಭಾರತ್ ಗೌರವ ಅಧ್ಯಕ್ಷರಾದ ಅರುಣ್ ಕುಮಾರ್, ಅಧ್ಯಕ್ಷರಾದ ಶ್ರೀಕಾಂತ್ ಎಸ್ ಇಂದಬೆಟ್ಟು, ಕಾರ್ಯದರ್ಶಿ ನವೀನ್ ನಡುಗುಡ್ಡೆ, ವಿ.ಎಚ್.ಪಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಭಾಸ್ಕರ್ ಧರ್ಮಸ್ಥಳ, ಉಪಾಧ್ಯಕ್ಷರಾದ ಶ್ರೀಧರ್ ಗುಡಿಗಾರ್ ನಾವೂರು ಹಾಗೂ ನವ ಭಾರತ್ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment