ಮಂಗಳೂರು: ಮಂಜೇಶ್ವರದ ದೈಗೋಳಿ ನಿವಾಸಿ ಖ್ಯಾತ ಪಾಕಶಾಸ್ತ್ರಜ್ಞ ದಿ. ವೆಂಕಟರಮಣ ತೋಡಿನ್ನಾಯ ಅವರ ಧರ್ಮಪತ್ನಿ ಜಯಲಕ್ಷ್ಮೀ ತೋಡಿನ್ನಾಯ (83) ಅವರು ಜ.19ರಂದು ಬೆಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ನಿಧನರಾಗಿದ್ದಾರೆ.
ಮೃತರಿಗೆ ಹಲವು ಕಂಪನಿಗಳಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸಿ ನಿವೃತ್ತರಾದ ಬಾಲಕೃಷ್ಣ ತೋಡಿನ್ನಾಯ, ಗೊರ್ಲಾನ್ ಇಂಡಿಯಾ ಸ್ವಿಚ್‌ಗೇರ್ಸ್ ಪ್ರೈ. ಲಿನ ಹಿರಿಯ ಪ್ರಾದೇಶಿಕ ಪ್ರಬಂಧಕ ರವಿಶಂಕರ ತೋಡಿನ್ನಾಯ ಬಿ., ಶ್ರೀ ವಾಣಿ ವಿಜಯ ಹೈಸ್ಕೂಲ್ ಕೊಡ್ಲಮೊಗರು ಇದರ ನಿವೃತ್ತ ಮುಖ್ಯಶಿಕ್ಷಕಿ ಭಾರತಿ, ಬೆಂಗಳೂರಿನ ವೈದ್ಯೆ ಡಾ. ಸತ್ಯವತಿ ಹೀಗೆ ನಾಲ್ವರು ಮಕ್ಕಳು ಇದ್ದಾರೆ.
ಮೃತರು ಖ್ಯಾತ ಹಿನ್ನೆಲೆ ಗಾಯಕಿ ಕೆ.ಎಸ್. ಸುರೇಖಾ ಅವರ ಅತ್ತೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವಾಸುದೇವ ಹೊಳ್ಳ ಹಾಗೂ ಬೆಂಗಳೂರಿನಲ್ಲಿರುವ ಸುಬ್ರಹ್ಮಣ್ಯ ಮಠದ ಸುಂದರ ರಾಮ ಹೊಳ್ಳ ಅವರ ಸಹೋದರಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق