ಪೆರ್ಲ: ತುಳುನಾಡಿನ ಪ್ರಾಚೀನ ಜನಪದ ವಾದ್ಯವಾದ ಕಾಂತಗ ಎಂಬ ವಿಶಿಷ್ಟ ವಾದ್ಯೋಪಕರಣದ ತಯಾರಕರು ಮತ್ತು ವಾದ್ಯ ನುಡಿಸುವ ಹವ್ಯಾಸ ಬೆಳೆಸಿಕೊಂಡಿದ್ದ ಚೋಮ ಕಾಟುಕುಕ್ಕೆ (90) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ರಾತ್ರಿ ನಿಧನರಾದರು.
ಕೇರೆ ಹಾವಿನ ಬೆನ್ನೆಲುಬು ಹಾಗೂ ಚರ್ಮದ ಮೂಲಕ ಕಾಂತಗ ಎಂಬ ವಿಶಿಷ್ಟವಾದನ ತಯಾರಿಸುತ್ತಿದ್ದ ಇವರು ಜನಪದ ಕಾಂತಗ ವಾದ್ಯೋಪಕರಣ ತಯಾರಿಯ ಕೊನೆಯ ಕೊಂಡಿಯಾಗಿದ್ದರು. ಇವರ ಈ ವಿಶಿಷ್ಟ ಕಲಾ ಸೇವೆಯ ಸಾಧನೆಯನ್ನು ಪರಿಗಣಿಸಿ ಅಂಬೇಡ್ಕರ್ ವಿಚಾರ ವೇದಿಕೆ, ಮೊಗೇರ ಸಂಘ, ಸರ್ವೀಸ್ ಸೊಸೈಟಿ ಸಂಘ ಸಹಿತ ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿತ್ತು.
ಮೃತರು ಪತ್ನಿ ಕಮಲ, ಮಕ್ಕಳಾದ ಶ್ರೀಧರ ಬಾಬು, ಲಲಿತಾ, ಜಯಂತಿ, ಉಮೇಶ, ರವಿ, ಸುಮತಿ, ಸುನಿತಾ ಅವರನ್ನು ಅಗಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق