ಉಜಿರೆ: ಉಜಿರೆ ಶ್ರೀ ಧ. ಮ. ಹಿರಿಯ ಪ್ರಾಥಮಿಕ ಶಾಲಾ (ಜನಾರ್ದನ ಶಾಲೆ) ನಿವೃತ್ತ ಶಿಕ್ಷಕ ಉಜಿರೆ ವಿದ್ಯಾನಗರ ನಿವಾಸಿ ದೇವಪ್ಪ ಗೌಡ (92ವ) ಅ.28ರಂದು ನಿಧನರಾದರು. ಮೂಲತ ಇವರು ಕರಾಯ ಗ್ರಾಮದ, ಕಲ್ಲೇರಿಯ ಇಜಿಮಾನ್ ಮನೆ ನಿವಾಸಿ.
ಮೃತರು ಪತ್ನಿ ಗಾಯತ್ರಿ, ಪುತ್ರ ಡಾ. ಜಯಪ್ರಕಾಶ್ ಗೌಡ, ಪುತ್ರಿ ಸುಜಾತಾ, ಸೊಸೆ ಸಂಧ್ಯಾ, ಅಳಿಯ ಶಿವಪ್ರಸಾದ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ತಮ್ಮ ಸೇವಾವಧಿ ಮತ್ತು ನಿವೃತ್ತಿಯ ಬಳಿಕವೂ ಆಸಕ್ತ ವಿದ್ಯಾರ್ಥಿಗಳಿಗೆ ಮುಖವರ್ಣಿಕೆ, ರಂಗ ತರಬೇತಿ, ನಾಟಕ ರಚನೆ ಮತ್ತು ನಿರ್ದೇಶನ, ಯಕ್ಷಗಾನ, ಚಿತ್ರಕಲೆ ತರಬೇತಿ ನೀಡುತ್ತಿದ್ದರು. ಸ್ವತಃ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು.
ಉಜಿರೆ ಪರಿಸರದಲ್ಲಿ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದುಕೊಂಡು, ಮಾರ್ಗದರ್ಶನ ನೀಡುತ್ತಿದ್ದರು. ಕೃಷಿ, ಹೈನುಗಾರಿಕೆಯಲ್ಲೂ ಆಸಕ್ತಿ ಹೊಂದಿದ್ದರು.
ಬೆಳ್ತಂಗಡಿ ಗೌಡ ಸಂಘ, ವಾಣಿ ವಿದ್ಯಾ ಸಂಸ್ಥೆಗಳಿಗೆ ಗೌರವ ಸಲಹೆಗಾರರಾಗಿದ್ದರು.
2009ರಲ್ಲಿ ಉಜಿರೆಯಲ್ಲಿ ನಡೆದಿದ್ದ ವಿಶ್ವ ತುಳು ಸಮ್ಮೇಳನದ ತುಳುಗ್ರಾಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರ ಪಾತ್ರ ನಿರ್ವಹಿಸಿದ್ದರು.
ಉಜಿರೆಯ ಅವರ ನಿವಾಸಕ್ಕೆ ಬಂಧು ಮಿತ್ರರು, ವಿದ್ಯಾರ್ಥಿಗಳು, ನಾಗರಿಕರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ದೇವಪ್ಪ ಮಾಸ್ತರ್ ನಿಧನಕ್ಕೆ ಉಜಿರೆಯ ನಾಗರಿಕರು ಕಂಬನಿ ಮಿಡಿದಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق