ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಘುನಾಥ ರೈ ನುಳಿಯಾಲು ನಿಧನ

ರಘುನಾಥ ರೈ ನುಳಿಯಾಲು ನಿಧನ



ಮಂಗಳೂರು: ನಿವೃತ್ತ ಶಿಕ್ಷಕ, ಸಾಹಿತಿ ರಘುನಾಥ ರೈ ನುಳಿಯಾಲು ಶನಿವಾರ ನಿಧನರಾದರು. ಸುಳ್ಯಪದವು ಬಾಲಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 33 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.


ಬಹುಮುಖ ಪ್ರತಿಭೆಯಾಗಿದ್ದ ಇವರ ಸೇವೆ ಪರಿಗಣಿಸಿ 1993 ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ' ಪ್ರಶಸ್ತಿ, 2015 ರಲ್ಲಿ ಎನ್.ಎಸ್. ಕಿಲ್ಲೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಸನ್ಮಾನಗಳು ಅವರಿಗೆ ಲಭಿಸಿದ್ದವು.


2018 ರಲ್ಲಿ ಪುತ್ತೂರಿನಲ್ಲಿ ನಡೆದ ಕರ್ನಾಟಕ ಏಕೀಕರಣ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ಚೂರಿಪದವು ಶಾಲೆಯಲ್ಲಿ ನಡೆದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಗಡಿನಾಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ನುಳಿಯಾಲು ತರವಾಡು ಟ್ರಸ್ಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಉತ್ತಮ ವಾಗ್ನಿಯಾಗಿ ಹಲವು ಕಡೆ ಧಾರ್ಮಿಕ ಮತ್ತು ಸಾಹಿತ್ಯ ಉಪನ್ಯಾಸಗಳನ್ನು ನೀಡಿದ್ದರು. ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಆಡಳಿತ ಮಂಡಳಿ ಸದಸ್ಯರಾಗಿ, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.


ಯಕ್ಷಗಾನ ಮತ್ತು ಕಾವ್ಯವಾಚನದಲ್ಲೂ ಹೆಸರು ಪಡೆದಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಬದುಕು ಬಗ್ಗೆ ಅನೇಕ ಲೇಖನಗಳನ್ನೂ ಪತ್ರಿಕೆಗಳಿಗೆ ಬರೆದಿದ್ದರು. ಪತ್ನಿ, ಮುಂಡೂರು ಶಾಲಾ ನಿವೃತ್ತ ಮುಖ್ಯಗುರು ವಾರಿಜಾ ಕೆ. ರೈ, ಪುತ್ರ ಮಂಗಳೂರಿನ ಯೆನಪೋಯ ಡೀಮ್ಸ್ ಯುನಿವರ್ಸಿಟಿಯ ಮೆಡಿಕಲ್‌ ಸೂಪರಿಂಡೆಂಟ್ ಡಾ. ಸುಭಾಸ್ ರೈ ನುಳಿಯಾಲು, ಸೊಸೆ ಮಂಗಳೂರಿನಲ್ಲಿ ವೈದ್ಯೆಯಾಗಿರುವ ಡಾ. ದೀವಿಕಾ ರೈ, ಪುತ್ರಿ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಸ್ಮಿತಾ ಕೆ.ಎನ್. ರೈ., ಅಳಿಯ ಪುತ್ತೂರಿನ ವಕೀಲರಾದ ಸುರೇಶ್ ರೈ ಪಡ್ಡಂಬೈಲು, ಸಹೋದರ ನಾರಾಯಣ ರೈ ನುಳಿಯಾಲು, ಸಹೋದರಿ ನೇತ್ರಾವತಿ ಶೆಟ್ಟಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.


ಹಿರಿಯ ತಲೆಮಾರಿನ ಪ್ರಸಿದ್ಧ ಯಕ್ಷಗಾನ ಕಲಾವಿದರು ಮತ್ತು ಅರ್ಥಧಾರಿಗಳೂ ಆಗಿದ್ದ ಬಂಧು ನುಳಿಯಾಲು ರಘುನಾಥ ರೈ ಅವರಿಗೆ 'ಕರ್ನಾಟಕ ಯಕ್ಷ ಭಾರತಿ ಪುತ್ತೂರು' ಮತ್ತು 'ಯಕ್ಷಾಂಗಣ ಮಂಗಳೂರು ಸಂಸ್ಥೆಗಳು ಶ್ರದ್ಧಾಂಜಲಿ ಸಲ್ಲಿಸಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

0 Comments

Post a Comment

Post a Comment (0)

Previous Post Next Post