ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವಿ ಕಟ್ಟತ್ತಿಲ ಗೋಪಾಲ ಕೃಷ್ಣ ಭಟ್ ನಿಧನ

ಕವಿ ಕಟ್ಟತ್ತಿಲ ಗೋಪಾಲ ಕೃಷ್ಣ ಭಟ್ ನಿಧನ



ಬಂಟ್ವಾಳ: ಸಾಲೆತ್ತೂರು ಸಮೀಪದ ಕಟ್ಟತ್ತಿಲ ನಿವಾಸಿ ಕಟ್ಟತ್ತಿಲ ಗೋಪಾಲ ಕೃಷ್ಣ ಭಟ್  (51 ವರ್ಷ) ಅವರು ಶುಕ್ರವಾರ ಸಂಜೆ (ಫೆ.9) ಮಂಗಳೂರು ವೆನ್ಲೋಕ್ ಆಸ್ಪತ್ರೆಯಲ್ಲಿ‌ ಅಲ್ಪ‌ ಕಾಲದ ಅಸೌಖ್ಯದಿಂದ ನಿಧನರಾದರು. ಅವಿವಾಹಿತರಾಗಿದ್ದ ಅವರು ಪುತ್ತೂರು ಸಾಹಿತ್ಯ ವೇದಿಕೆಯನ್ನು ಕಟ್ಟಿ ಬೆಳೆಸಿದ್ದರು. ಹಲವಾರು ಕವಿಗೋಷ್ಟಿಗಳನ್ನು ನಡೆಸಿ ಕಿರಿಯ ಹಿರಿಯ ಕವಿಸಾಧಕರಿಗೆ ಸನ್ಮಾನಿಸಿ ಗೌರವಿಸಿದ್ದರು.


ಹಲವು ಕಿರುಚಿತ್ರಗಳಲ್ಲಿ ನಟಿಸಿದ್ದು ಕಾಂತಾರ ಸಿನಿಮಾ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಸಹ ನಟರಾಗಿ ಅಭಿನಯಿಸಿದ್ದರು. ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಕೆಲವು ಕೃತಿಗಳನ್ನು ಬಿಡುಗಡೆಗೊಳಿಸಿದ್ದರು. ಹಿರಿಯ ಸಹೋದರ ಕಟ್ಟತ್ತಿಲ ವೆಂಕಟರಮಣ ಭಟ್ ಸೇರಿದಂತೆ ಇಬ್ಬರು ಅಣ್ಣಂದಿರು, ಮೂವರು ಅಕ್ಕಂದಿರು, ಅಪಾರ ಬಂಧುಗಳನ್ನು ಅಗಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

0 تعليقات

إرسال تعليق

Post a Comment (0)

أحدث أقدم