ಮಂಗಳೂರು: ಉದ್ಯಮಿಯಾಗಿ, ಯಕ್ಷಗಾನ ವೇಷಧಾರಿ ಹಾಗೂ ಕಲಾವಿದನಾಗಿ ಖ್ಯಾತಿ ಹೊಂದಿದ್ದ ಎಂ.ಬಿ.ಎ. ಪದವೀಧರ ಎಂ.ಎಂ.ಸಿ. ರೈ (ಮೋಹನ ಚಂದ್ರ ರೈ-55) ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಮುಂಜಾನೆ ಕುಳಾಯಿ ಹೊನ್ನಕಟ್ಟೆ ಬಳಿಯ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಯಕ್ಷಗಾನ ರಂಗದ ಅತ್ಯುತ್ತಮ ಅರ್ಥಧಾರಿ ಮತ್ತು ವೇಷಧಾರಿಯಾಗಿದ್ದ ಎಂ.ಎಂ.ಸಿ. ರೈ ಅವರು ಮೊನ್ನೆ ತಾನೇ 2023 ನವೆಂಬರ್ 25ರಂದು ನಮ್ಮ ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ಶಲ್ಯನ ಪಾತ್ರವಹಿಸಿ ತರ್ಕಬದ್ಧ ಅರ್ಥ ಹೇಳಿದ್ದರು. ತಮ್ಮ ತುಳುನಾಡು ಬೋರ್‌ವೆಲ್ಸ್ ಎಂಬ ಉದ್ಯಮ ಸಂಸ್ಥೆಯ ಮೂಲಕ ಅವಿಭಜಿತ ಜಿಲ್ಲೆಯಲ್ಲಿ ನೂರಾರು ಕೊಳವೆ ಬಾವಿಗಳನ್ನು ನಿರ್ಮಿಸಿ ಜನಪ್ರಿಯರಾಗಿದ್ದ ಅವರು ಕೊಡುಗೈ ದಾನಿ ಎನಿಸಿದ್ದರು.
ಮೋಹನಚಂದ್ರ ರೈ ಅವರ ನಿಧನಕ್ಕೆ ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಪ್ರಾರ್ಥಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق