ಕುಂದಾಪುರ: ಭಂಡಾರಕಾರ್ಸ್ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ವಿಭಾಗದ ಮುಖ್ಯಸ್ಥರಾಗಿ ಸುದೀರ್ಘ ಕಾಲ ಅನುಪಮ ಸೇವೆ ಸಲ್ಲಿಸಿ ಸರ್ವ ವಿದ್ಯಾರ್ಥಿಗಳ ಶಿಕ್ಷಕ ಶಿಕ್ಷಕೇತರ ಬಂಧುಗಳ ಪ್ರೀತಿಗೆ ಪಾತ್ರರಾಗಿದ್ದ ಪ್ರೊ.ಡಾ.ರಾಮಚಂದ್ರ (62) ಅವರು ಮಂಗಳವಾರ ಸುರತ್ಕಲ್ ಮಂಗಳ ಪೇಟೆಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಕೇವಲ ಎರಡು ವರುಷಗಳ ಹಿಂದೆ ಸೇವಾ ನಿವೃತ್ತಿ ಹೊಂದಿದ್ದರು. ಕಾಲೇಜಿನಲ್ಲಿ ಹತ್ತು ಹಲವು ರಾಷ್ಟ್ರ ರಾಜ್ಯ ಮಟ್ಟದ ವಿಚಾರ ಸಂಕಿರಣ ಜಾನಪದ ಉತ್ಸವ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುವುದರಲ್ಲಿ ಪ್ರಮುಖ ಕೊಡುಗೆ ನೀಡಿದ್ದರು.
ಮೂಲತಃ ಸುರತ್ಕಲ್ ಕಾಟಿಪಳ್ಳದವರು. ಸಾಕಷ್ಟು ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ದೇವಸ್ಥಾನದ ಮುಖ್ಯಸ್ಥರಾಗಿ ಕೂಡಾ ತಮ್ಮ ಧಾಮಿ೯ಕ ಸೇವೆಯಲ್ಲಿ ತಮ್ಮನ್ನು ಅಪ೯ಣೆ ಮಾಡಿಕೊಂಡಿದ್ದರು. ಮಂಗಳೂರು ಮೂಲ್ಕಿ ಉಡುಪಿ ಕುಂದಾಪುರ ಪರಿಸರದಲ್ಲಿ ಅಪಾರ ಸ್ನೇಹಿತರನ್ನು ಹೊಂದಿದ್ದರು. ಸ್ನೇಹಿತರೆಂದರೆ ಜೀವಕ್ಕೆ ಜೀವ ಕೊಡುವ ಸ್ನೇಹಿತ ಅನ್ನುವ ಮಟ್ಟಿಗೆ ರಾಮಚಂದ್ರರ ಸ್ನೇಹಿತರ ಬಾಂಧವ್ಯವಿತ್ತು. ಬದುಕಿನಲ್ಲಿ ಇನ್ನಷ್ಟು ಏನಾದರೂ ಸಾಧನೆ ಮಾಡ ಬೇಕೆಂಬ ಛಲ ಅವರಲ್ಲಿ ಇತ್ತು.
ಮಣಿಪಾಲ್ ಅಕಾಡೆಮಿಯ ಮುಲ್ಕಿ ವಿಜಯ ಕಾಲೇಜಿನಲ್ಲಿ ಕೂಡ ಹಲವು ವರುಷಗಳ ಕಾಲ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಸಗಿ ಸೇವೆ ಸಲ್ಲಿಸಿ ಅನಂತರದಲ್ಲಿ ಕುಂದಾಪುರ ಭಂಡಾರ್ಕರ್ಸ್ ಕಾಲೇಜಿಗೆ ವರ್ಗಾವಣೆಗೊಂಡಿದ್ದರು.
ಅವರು ಪತ್ನಿ ಪುತ್ರಿಯರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق