ಮಂಗಳೂರು: ಇಂದು (ಅ.1) ಅಪರಾಹ್ನ ಮೂರು ಗಂಟೆ ಸುಮಾರಿಗೆ 87 ವರ್ಷ ವಯಸ್ಸಿನ ಹಿರಿಯ ನೃತ್ಯಗುರು, ಶಿಕ್ಷಕ, ಲಲಿತ ಕಲಾ ಸದನ ಸಂಸ್ಥೆಯ ಸ್ಥಾಪಕ ಬಿ. ಪ್ರೇಮನಾಥ ಮಾಸ್ಟರ್‌ರವರು ಕೋಡಿಕಲ್‌ನಲ್ಲಿರುವ ಸ್ವಗೃಹದಲ್ಲಿ ವಿಧಿವಶರಾಗಿರುವರು.
ಪತ್ನಿ, ಪುತ್ರ, ಇಬ್ಬರು ಪುತ್ರಿಯರು, ಅಪಾರ ಬಂಧುಮಿತ್ರರು, ಶಿಷ್ಯವೃಂದವನ್ನು ಅಗಲಿರುವ ಅವರು ಕಥಕ್ಕಳಿ, ಭರತನಾಟ್ಯ, ಅಭ್ಯಾಸ ದೊಂದಿಗೆ ಸಂಗೀತ, ಮೃದಂಗ ವಾದನವನ್ನು ಕಲಿತವರು. ಚಿತ್ರಕಲೆ, ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿದ ಇವರು ಮಂಗಳೂರಿನ ಸೈಂಟ್ ಅಲೋಶಿಯಸ್ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ
Post a Comment