ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತೋಟದ ಬೇಲಿ ಮುರಿದು ಗಿಡ, ಬೆಳೆ ನಾಶ, ಲಕ್ಷಾಂತರ ನಷ್ಟ

ತೋಟದ ಬೇಲಿ ಮುರಿದು ಗಿಡ, ಬೆಳೆ ನಾಶ, ಲಕ್ಷಾಂತರ ನಷ್ಟ



ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿ ಗ್ರಾಮದಲ್ಲಿ ಹಿಡುವಳಿ ಜಮೀನಿನಲ್ಲಿ ರೈತರೊಬ್ಬರು   ಹಾಕಲಾಗಿದ್ದ ಅಡಿಕೆ ಸಸಿಗಳನ್ನು ನಾಶ ಮಾಡಿ, ತೊಂಡೆ ಬೆಳೆಯನ್ನು ಕಿತ್ತು ಹಾಕಿ, ರಕ್ಷಣೆಗಾಗಿ ಹಾಕಿದ್ದ ಸೋಲಾರ್ ಸಿಸಿ ಕ್ಯಾಮರಾಗಳನ್ನು ಒಡೆದು ಹಾಕಿ ದೌರ್ಜನ್ಯ ನಡೆಸಿ‌ ಲಕ್ಷಾಂತರ ರೂ ನಾಶ ಮಾಡಿರುವ ಘಟನೆ ನಡೆದಿದೆ.


ಕಾಶಿಮುರುಕನಹಳ್ಳಿ ಗ್ರಾಮದ ದಿ. ನರಸೇಗೌಡರ ಮಗ ಗೋಕರ್ಣ ಎಂ.ಎನ್. ಇವರು ತಮಗೆ ಸೇರಿದ ಸರ್ವೆ ನಂ.25/ 6ರಲ್ಲಿರುವ ಹಿಡುವಳಿ ಜಮೀನಲ್ಲಿ ಬೆಳೆಸಿದ್ದ 33 ಅಡಿಕೆ ಗಿಡಗಳು, ತೊಂಡೇ ಬೆಳೆ, ತೊಂಡೆ ಬಳ್ಳಿ ಹಬ್ಬಲು ಹಾಕಿದ್ದ ಕಲ್ಲಿನ ಚಪ್ಪರ, ಹಾಗೂ ಸೋಲಾರ್ ಸಿಸಿ ಕ್ಯಾಮರಾಗಳನ್ನು ಇದೇ ಕಾಶಿ ಮುರುಕನಹಳ್ಳಿ ಗ್ರಾಮದ ರಾಮೇಗೌಡ, ಕುಮಾರ, ಕಾಂತರಾಜ, ಜಗದೀಶ, ಅನಿತಾ, ದಿನೇಶ, ಅರ್ಪಿತಾ, ನಿಂಗೇಗೌಡ, ಬಸವರಾಜು, ವೆಂಕಟೇಶ, ಪರಮೇಶ, ಕುಳ್ಳೇಗೌಡ ಮತ್ತಿತರರು ಗುಂಪುಗೂಡಿಕೊಂಡು ನಮ್ಮ ಕುಟುಂಬದ ಮೇಲಿನ  ಹಳೆಯ ದ್ವೇಷದಿಂದ ನಾಶ ಮಾಡಿರುತ್ತಾರೆ. ಇದರಿಂದ ನಮಗೆ ಲಕ್ಷಾಂತರ ರೂ‌ಪಾಯಿ ನಷ್ಟವಾಗಿರುತ್ತದೆ. ಅಲ್ಲದೇ ನಮ್ಮ‌ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿರುವ ವಿಚಾರವು ಸಿಸಿ ಕ್ಯಾಮರಾದ ಪುಟೇಜ್ ನಲ್ಲಿ ದಾಖಲಾಗಿರುತ್ತದೆ. ಇದಲ್ಲದೆ ನಮ್ಮ ತಾಯಿ ಪುಟ್ಟಲಕ್ಷ್ಮಮ್ಮ ಹಾಗೂ ಪತ್ನಿ ಹರ್ಷಿತಾ ಇವರು ಜಮೀನಿನ ಕಡೆ ಹೋಗಿದ್ದಾಗ ಈ‌‌ ಮೇಲ್ಕಂಡ ವ್ಯಕ್ತಿಗಳು ಅವಾಚ್ಯ ಶಬ್ದ ಬೈಯ್ಯುವುದಲ್ಲದೇ ಬೆದರಿಕೆ ಕೂಡ ಹಾಕಿರುತ್ತಾರೆ  ಇದರಿಂದ ನಮ್ಮ ಕುಟುಂಬದವರು ಜಮೀನನ ಬಳಿ ಹೋಗಲು ಭಯಪಡುತ್ತಿದ್ದಾರೆ. ಹಾಗಾಗಿ ಅಡಿಕೆ, ತೊಂಡೆ ಬೆಳೆ ನಾಶ ಮಾಡಿ, ಬೆಳೆ ರಕ್ಷಣೆಗಾಗಿ ಹಾಕಿಸಿದ್ದ ಸೋಲಾರ್ ಸಿಸಿ ಕ್ಯಾಮರಾ ಒಡೆದು ಹಾಕಿ, ಕುಟುಂಬದವರಿಗೆ ಕೊಲೆ ಬೆದರಿಕೆ ಹಾಕಿರುವವರ ವಿರುದ್ದ ಸೂಕ್ತ ಕಾನೂನು‌ ಕ್ರಮ ಕೈಗೊಂಡು ನ್ಯಾಯ ಕೊಡಿಸುವಂತೆ ರೈತ ಗೋಕರ್ಣ ಎಂ.ಎನ್‌ ಅವರು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ.


ದೂರು ಸ್ವೀಕರಿಸಿರುವ ಸಬ್ ಇನ್ಸ್ ಪೆಕ್ಟರ್ ಸುಬ್ಬಯ್ಯ ಅವರು ಪ್ರಕರಣ ದಾಖಲಿಸಿ‌ ಮುಂದಿನ ತನಿಖೆ ಕೈಗೊಂಡಿದ್ದಾರೆ.


0 تعليقات

إرسال تعليق

Post a Comment (0)

أحدث أقدم