ಪೆರ್ಲ: ಅಡಿಕೆ ಸಸಿಗಳನ್ನು ಹೇರಿಕೊಂಡು ಬರುವ ನಡುವೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪಿಕ್ ಆಪ್ ಟೆಂಪೊಕ್ಕೆ ಕರ್ನಾಟಕ ಸಾರಿಗೆ (ಕೆಎಸ್ಸಾರ್ಟಿಸಿ) ಬಸ್ಸು ಡಿಕ್ಕಿಯಾಗಿ ಪಿಕ್ ಆಪ್ ಚಾಲಕ ದಾರುಣವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಇಂದು (ಮಂಗಳವಾರ) ಬೆಳಗ್ಗೆ 9.15 ಗಂಟೆಯ ಸುಮಾರಿಗೆ ಅಡ್ಕಸ್ಥಳ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದ್ದು ಮಣಿಯಂಪಾರೆ ನಿವಾಸಿ ಮುಸ್ತಾಫ ಪಜ್ಜಾನ (43) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಎದುರಿನಿಂದ ಬಂದ ಕಾರೊಂದನ್ನು ತಪ್ಪಿಸುವ ರಭಸದಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಪಿಕ್ ಅಪ್‌ಗೆ ಬಡಿದಿದ್ದು ತಲೆಗೆ ತೀವ್ರ ಗಾಯಗೊಂಡಿರುವ ಮುಸ್ತಫಾರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಿಲ್ಲ. ಇವರು ಕೆಲಸಗಾರರೊಂದಿಗೆ ಅಡಿಕೆ ಸಸಿ ತರಲು ತೆರಳಿರುವ ವೇಳೆ ಈ ದುರ್ಘಟನೆ ಸಂಭವಿಸಿದ್ದು ಜತೆಗಿದ್ದ ಇನ್ನೊರ್ವರಿಗೂ ಗಾಯಗಳಾಗಿರುವ ಬಗ್ಗೆ ತಿಳಿದು ಬಂದಿದೆ. ಬದಿಯಡ್ಕ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ
Post a Comment