ದೈಹಿಕ ಹಲ್ಲೆಗೊಳಗಾದ ಭಾಸ್ಕರ ನಾಯ್ಕ
ಉಜಿರೆ: ದಲಿತ ಸಮುದಾಯಕ್ಕೆ ಸೇರಿದ ಉಜಿರೆ ಗ್ರಾಮದ ಬಡೆಕೊಟ್ಟು ನಿವಾಸಿ ಭಾಸ್ಕರ ನಾಯ್ಕ ಎಂಬವರಿಗೆ ಸೆಪ್ಪೆಂಬರ್ 2 ರಂದು ಶನಿವಾರ ಸಂಜೆ 5 ಗಂಟೆಗೆ ಆತ ಮನೆಗೆ ಹೋಗುತ್ತಿದ್ದ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಬಳಗದವರು ದೈಹಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ನೀಡಿದ ಘಟನೆ ವರದಿಯಾಗಿದೆ.
ಭಾಸ್ಕರ ನಾಯ್ಕರು ಶನಿವಾರ ಮಂಗಳೂರಿನಲ್ಲಿ ಯೂಟ್ಯೂಬ್ ವಾಹಿನಿಗೆ ಸಂದರ್ಶನ ನೀಡಿ ತನ್ನ ಮನೆಗೆ ಹಿಂದೆ ಬರುವಾಗ ಸಂಜೆ ಸುಮಾರು 5 ಗಂಟೆಗೆ ಉಜಿರೆ ಗ್ರಾಮದ ಪಾಣೆಯಾಲು ಎಂಬಲ್ಲಿ ತಲುಪಿದಾಗ ಆರೋಪಿಗಳಾದ ಮಹೇಶ್ ಶೆಟ್ಟಿ ತಿಮರೋಡಿ, ಮೋಹನ್ ಶೆಟ್ಟಿ ಪಾಣೆಯಾಲು, ಮುಖೇಶ್ ಶೆಟ್ಟಿ, ಪ್ರಜ್ವಲ್ ಗೌಡ, ನೀತು ಶೆಟ್ಟಿ ಪಾಣೆಯಾಲು ಮತ್ತು ಇತರರು ಕಾರಿನಲ್ಲಿ ಬಂದು ಎಲ್ಲರೂ ಕಾರಿನಿಂದ ಇಳಿದು ಭಾಸ್ಕರ ನಾಯ್ಕರನ್ನು ತಡೆದು 'ಬೇವಾರ್ಸಿ' ಮೊದಲಾದ ಅನಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಮುಷ್ಟಿ ಗಾತ್ರದ ಕಲ್ಲುಗಳಿಂದ ಬೆನ್ನಿಗೆ, ಎದೆಗೆ, ಮುಖಕ್ಕೆ ಮತ್ತು ಕಾಲಿಗೆ ಹೊಡೆದರು. ಭಾಸ್ಕರ ನಾಯ್ಕರ ಬೊಬ್ಬೆ ಕೇಳಿ ಮನೆಯಿಂದ ಅವರ ಹೆಂಡತಿ ಮಮತಾ ಓಡಿ ಬಂದು ಭಾಸ್ಕರ ನಾಯ್ಕರನ್ನು ಎಬ್ಬಿಸಿ ಕರೆದುಕೊಂಡು ಹೋಗಲು ಯತ್ನಿಸಿದರು. ಆಗ ಪ್ರಮೋದ್ ಶೆಟ್ಟಿ ಹೆಂಡತಿಯ ಎಡಕಾಲಿನ ತೊಡೆಗೆ ಕಲ್ಲಿನಿಂದ ಹೊಡೆದಾಗ ಇಬ್ಬರೂ ಜೋರಾಗಿ ಬೊಬ್ಬೆ ಹಾಕಿದರು.
ಆಗ ಅಲ್ಲಿಗೆ ಬಂದ ಪರಿಚಿತರಾದ ಜಯಪ್ರಕಾಶ್ ಶೆಟ್ಟಿ, ಶಂಕರ ಶೆಟ್ಟಿ, ತಿಮರೋಡಿ ಸುರೇಶ್ ನಾಯ್ಕ ಮತ್ತು ಇತರರನ್ನು ನೋಡಿ ಆರೋಪಿಗಳು ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾದರು.
ವಾಹಿನಿಗೆ ನೀಡಿದ ಸಂದರ್ಶನದ ಕಾರಣಕ್ಕಾಗಿ ಆರೋಪಿಗಳು ಭಾಸ್ಕರ ನಾಯ್ಕರಿಗೆ ದೈಹಿಕ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಗೆ ಸೆಪ್ಟೆಂಬರ್ 3ರಂದು ಭಾನುವಾರ ಭಾಸ್ಕರ ನಾಯ್ಕ ನೀಡಿದ ಮೌಖಿಕ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಪಿ.ಸಿ. ಜಗದೀಶ್ ಬೆಳ್ಳುಂಡಗಿ ಭಾನುವಾರ ಸಂಜೆ 5 ಗಂಟೆಗೆ ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್.) ಯನ್ನು ಮಂಗಳೂರಿನಲ್ಲಿರುವ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಅದರ ಪ್ರತಿಯನ್ನು ಪೊಲೀಸ್ ವರಿಷ್ಠಾಧಿಕಾರಿಯವರಿಗೂ ಸಲ್ಲಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق