ಕನ್ಯಾನ: ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪದ್ಯಾಣ ನಿವಾಸಿ, ಬಾಯಾರು ಮುಳಿಗದ್ದೆ ಹೆದ್ದಾರಿ ಎ.ಯು.ಪಿ. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಎನ್.ಗೋವಿಂದ ಭಟ್ (89) ವಯೋಸಹಜ ಅನಾರೋಗ್ಯದಿಂದ ಆ.16ರಂದು ಬುಧವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
1934, ಆ.21ರಂದು ರಲ್ಲಿ ಜನಿಸಿದ ಇವರು, ಶಿಕ್ಷಕ ವೃತ್ತಿಯಿಂದ ನಿವೃತ್ತಿ ಬಳಿಕ ಅದೇ ಶಾಲೆಯ ಮಿತ್ರ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು. ಇವರು ಹೋಮಿಯೋಪಥಿ ಚಿಕಿತ್ಸಕರಾಗಿದ್ದರು. ಕರೋಪಾಡಿ ವ್ಯವಸಾಯಿಕ ಸಹಕಾರಿ ಬ್ಯಾಂಕಿನಲ್ಲಿ ಎರಡು ಬಾರಿ ನಿರ್ದೇಶಕರಾಗಿ ನಿರ್ವಹಿಸಿದ್ದಾರೆ.
ಉತ್ತಮ ನಾಟಕಕಾರ, ಪ್ರಗತಿಪರ ಕೃಷಿಕ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಮೂವರು ಗಂಡು ಮಕ್ಕಳ ಸಹಿತ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق