ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಷ್ಟು ಸಹಾಯ ಮಾಡಿಯೂ ಯಾರಿಗೂ ಗೊತ್ತಾಗಬಾರದು ಎಂದರೆ ಹೇಗೆ?

ಅಷ್ಟು ಸಹಾಯ ಮಾಡಿಯೂ ಯಾರಿಗೂ ಗೊತ್ತಾಗಬಾರದು ಎಂದರೆ ಹೇಗೆ?


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಎಂಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ ಶ್ರೀ ದೇವಿ ಎಂಬ ದೇಶಭಕ್ತ ಹೆಣ್ಣುಮಗಳು ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ವಿಷಯ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಗಮನಕ್ಕೆ ಬಂದಾಗ ಅವರು ದೆಹಲಿಯಲ್ಲಿದ್ದರು. ತಕ್ಷಣ ಆಕೆಯ ಚಿಕಿತ್ಸೆಗೆ ತುರ್ತಾಗಿ ಒಂದೂವರೆ ಲಕ್ಷ ರೂಪಾಯಿ  ಕಳುಹಿಸಿಕೊಟ್ಟಿದ್ದಾರೆ.


ಅದರೊಂದಿಗೆ ಅವಳ ಮನೆಯವರೊಂದಿಗೆ ಮಾತನಾಡಿ ಧೈರ್ಯ ತುಂಬಿದ್ದಾರೆ. ಮುಂದಿನ ದಿನಗಳಲ್ಲಿ ಅಗತ್ಯಬಿದ್ದಲ್ಲಿ ಯಾವ ರೀತಿಯ ಸಹಾಯ ಮಾಡಲು ಕೂಡ ಸಿದ್ಧ ಎಂದು ತಿಳಿಸಿದ್ದಾರೆ.


ಇಷ್ಟು ಸಹಾಯ ಮಾಡಿದರೂ ನಳಿನ್ ಅವರು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಇಂತಹ ನೂರಾರು ಸಹಾಯಗಳನ್ನು ಮೌನದಲ್ಲಿಯೇ ಮಾಡಿಬರುವ ನಳಿನ್ ಕುಮಾರ್ ಕಟೀಲ್ ಬಹಿರಂಗ ಪ್ರಚಾರ ಎಂದೂ ಬಯಸಿದವರಲ್ಲ. ತಾವು ಸಹಾಯ ಮಾಡಿದ್ದನ್ನು ಯಾರಿಗೂ ಹೇಳುವುದು ಬೇಡಾ ಎಂದು ತಮ್ಮಿಂದ ಸಹಾಯ ಪಡೆದವರಿಗೂ ಅವರು ಹೇಳಿಬಿಡುತ್ತಾರೆ.


ರಾಜಕಾರಣಿಗಳಿಗೆ ಪ್ರಚಾರವೇ ಮುಖ್ಯವಾಗಿರುವ ದಿನಗಳಲ್ಲಿ ನಳಿನ್ ಪ್ರಚಾರದ ವಿಷಯದಲ್ಲಿ ಹಿಂದೆ ಬಿದ್ದಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم