ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೋಪಾಡ್ಕರ್ ಅವರಿಂದ ಬರವಣಿಗೆಯ ವಿಶೇಷ ತರಬೇತಿ ಶಿಬಿರ

ಗೋಪಾಡ್ಕರ್ ಅವರಿಂದ ಬರವಣಿಗೆಯ ವಿಶೇಷ ತರಬೇತಿ ಶಿಬಿರ


ಮಂಗಳೂರು: ಇಲ್ಲಿನ ಸ್ವರೂಪ ಸಂಸ್ಥೆಯ ಮುಖ್ಯಸ್ಥರಾದ ಗೋಪಾಡ್ಕರ್ ಅವರು ಒಂದು ವಿಶಿಷ್ಟವಾದ ಕ್ರಿಯಾಶೀಲ ತರಬೇತಿ ಶಿಬಿರವು ಗೋಪಾಡ್ಕರ್ ಮತ್ತು ಸುಮಾಡ್ಕರ್ ಸಾರಥ್ಯದಲ್ಲಿ ಭಾನುವಾರ (ಏ.16) ದಿನ ಪೂರ್ತಿ ನಡೆಯಿತು.


ಹಿರಿಯ ಸಾಹಿತಿ ವೈದ್ಯ ಡಾ ಸುರೇಶ ನೆಗಳಗುಳಿಯವರು ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರಾಸ್ತಾವಿಕ ಹಾಗೂ ಸ್ವಾಗತ ನುಡಿಗಳನ್ನು ಪಿಂಗಾರ ಸಾಹಿತ್ಯ ಬಳಗ ಹಾಗೂ ಪತ್ರಿಕೆಯ ಮುಖ್ಯಸ್ಥ ರೇಮಂಡ್ ಡಿಕೂನ ತಾಕೊಡೆ ಅವರು ನೆರವೇರಿಸಿದರು.


ಕುಮಾರಿ ಸ್ವರೂಪ ಅವರ ಅದ್ವಿತೀಯ ಜ್ಞಾನ ಸಂಪತ್ತಿನ‌ ಅನಾವರಣವಾದ ಪ್ರಾತ್ಯಕ್ಷಿಕೆಯ ಬಳಿಕ ಗೋಪಾಡ್ಕರ್ ರವರು ಮತ್ತು ಸುಮಾಡ್ಕರ್ ರವರು ಹೊಸ ಚಿಕಿತ್ಸಕ ಬರಹಗಳು ಪಾಸಿಟಿವ್ ಸಾಹಿತ್ಯ ಯಾಕಾಗಲ್ಲ" ಎಂಬ ವಿಚಾರದ ಬಗ್ಗೆ ಸವಿವರವಾದ ವ್ಯಾಖ್ಯಾನ ಹಾಗೂ ಸಂವಾದಗಳನ್ನು ನಡೆಸಿದರಲ್ಲದೆ ಮುಂದಿನ ರಾಷ್ಟ್ರೀಯ ಯೋಜನೆಗಳ ಪಕ್ಷಿನೋಟ ಬೀರಿದರು.


ಅಸೀಫ್ ರವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಧನಾತ್ಮಕ ದೃಷ್ಟಿಕೋನದ ಮೇಲೆ ಬೆಳಕು ಚೆಲ್ಲುವ ಹಲವಾರು ಹಿರಿಯ ಸಾಹಿತಿ ಹಾಗೂ ಬರಹಗಾರ ಆಸಕ್ತ ಶಿಬಿರಾರ್ಥಿಗಳು ಈ ಕಾರ್ಯಕ್ರಮವನ್ನು ದಿನವಿಡೀ ಆಸ್ವಾದಿಸಿದರು.


ವರದಿ: ಡಾ ಸುರೇಶ ನೆಗಳಗುಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم