ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾಹಿತಿ ಭೀಮರಾವ್ ವಾಷ್ಠರ್ ಅವರ ಜನ್ಮದಿನ ಸಂಭ್ರಮ

ಸಾಹಿತಿ ಭೀಮರಾವ್ ವಾಷ್ಠರ್ ಅವರ ಜನ್ಮದಿನ ಸಂಭ್ರಮ

ಸಾಹಿತ್ಯ ಕೃತಿಗಳ ಬಿಡುಗಡೆ- ಪ್ರಶಸ್ತಿ ಬಿರುದು ಪ್ರದಾನ- ಕವಿಗೋಷ್ಠಿ



ಸುಳ್ಯ: ಚಂದನ ಸಾಹಿತ್ಯ ವೇದಿಕೆಯ 12ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾಹಿತಿ, ಜ್ಯೋತಿಷಿ ಎಚ್. ಭೀಮರಾವ್ ವಾಷ್ಠರ್ ಅವರ 47ನೇ ವರ್ಷದ ಹುಟ್ಟುಹಬ್ಬ ಸಂಭ್ರಮದ ಪ್ರಯುಕ್ತ ಚಂದನ ಕವಿ ಸಂಗಮ-2023 ಸಮಾರಂಭದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ, ಕೃತಿಗಳ ಬಿಡುಗಡೆ, ಹಾಡೊಂದು ನಾ ಹಾಡುವೆನು ಫೈನಲ್ ಸಂಗೀತ ಸ್ಪರ್ಧೆ, ಸಾಧಕರಿಗೆ ಬಿರುದು- ರಾಜ್ಯಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸುಳ್ಯದ ಚಾರ್ಟೆಡ್ ಅಕೌಂಟೆಂಟ್ ಗಣೇಶ್ ಭಟ್ ರವರು ವಹಿಸಿದ್ದರು.


ಸರ್ವಾದ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ನಾರಾಯಣ ನಾಯ್ಕ ಕುದುಕೋಳಿ ರವರು ವಹಿಸಿ ಸಾಹಿತ್ಯ ಅಂತರಂಗದಿಂದ ಮೂಡಿದಾಗ ಮಾತ್ರ ಸಮಾಜದಲ್ಲಿ ಪ್ರತಿಫಲನಗೊಂಡು  ಸಮಾಜದಲ್ಲಿ ಬದಲಾವಣೆ ಮೂಡುವುದು ಖಂಡಿತ ಅಂತ ಹೇಳಿದರು.


ಸಾಧಕರಿಗೆ ಪ್ರಶಸ್ತಿ ಮತ್ತು ಬಿರುದು ಪ್ರದಾನ ಮಾಡಿದ ಸುಳ್ಯ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಪೇರಾಲು ಶುಭ ಹಾರೈಸಿದರು. ಕಾಸರಗೋಡಿನ ಲತಾ ಆಚಾರ್ಯ ಬನಾರಿ ಅವರ ಭಾವಗಾನ ಸಾಹಿತ್ಯ ಕೃತಿ ಮತ್ತು ಶರಭಯ್ಯ ಸ್ವಾಮೀ ತುರ್ವಿಹಾಳ ಅವರ ಭಾವ ಭಾಮಿನಿ ಜೀವ ಷಟ್ಪದಿ ಕೃತಿಗಳನ್ನು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಅಧ್ಯಕ್ಷ ಎಚ್ ಭೀಮರಾವ್ ವಾಷ್ಠರ್ ಬಿಡುಗಡೆ ಮಾಡಿದರು.


ಹಿರಿಯ ಸಾಹಿತಿ ಶ್ರೀಹರಿ ನರಸಿಂಹ ಉಪಾಧ್ಯಾಯ ಅವರು ಎರಡೂ ಕೃತಿಗಳನ್ನು ಪರಿಚಯ ಮಾಡಿದರು. ಸಿ.ಕೆ ನವೀನಚಂದ್ರ ಚಾತುಬಾಯಿ ಅವರಿಗೆ 2023ನೇ ಸಾಲಿನ ಆದರ್ಶ ಕೃಷಿರತ್ನ ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸಾಧಕರಾದ ಚಂದ್ರಾವತಿ ಬಡ್ಡಡ್ಕ ಅವರಿಗೆ ಚಂದನ ಸಾಹಿತ್ಯ ರತ್ನ ಪ್ರಶಸ್ತಿ, ಕೃಷ್ಣಪ್ಪ ಬಂಬಿಲ, ಚಂದನ ರಂಗಕಲಾ ರತ್ನ ಪ್ರಶಸ್ತಿ, ಮುರಳಿಕೃಷ್ಣ ಯಾದವ್ ನೀರ್ಚಾಲು ಅವರಿಗೆ ಚಂದನ ಸಂಗೀತ ರತ್ನ ಪ್ರಶಸ್ತಿ, ಲತಾ ಆಚಾರ್ಯ ಬನಾರಿ ಅವರಿಗೆ ಚಂದನ ಕಾವ್ಯ ಕುಸುಮ ಪ್ರಶಸ್ತಿ, ಸುಬ್ರಾಯ ಕಲ್ಪನೆ ಅವರಿಗೆ ಚಂದನ ಸಂಗೀತ ರತ್ನ ಪ್ರಶಸ್ತಿ, ಮಂಜುನಾಥ ನಾಯಕ ಎನ್ ಆರ್ ಅವರಿಗೆ ಚಂದನ ಸಾಹಿತ್ಯ ಕಿರಣ ಪ್ರಶಸ್ತಿ, ಅಬ್ದುಲ್ ಸಮದ್ ಬಾವಾ ಅವರಿಗೆ ಚಂದನ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು. ನಂತರ ಚಂದನ ಹಿರಿಯ ಸಾಹಿತ್ಯ ಗೋಷ್ಠಿ ನಡೆಯಿತು. ಹಾಡೊಂದು ನಾ ಹಾಡುವೆನು ಸಂಗೀತ ಸ್ಪರ್ಧೆಯ ಕಾರ್ಯಕ್ರಮವೂ ಕೂಡ ಖ್ಯಾತ ಗಾಯಕರಾದ ಮಿಥುನ್ ರಾಜ್ ವಿದ್ಯಾಪುರ ಅವರ ನೇತೃತ್ವದಲ್ಲಿ ನಡೆಯಿತು.


ಖ್ಯಾತ ಕವಯಿತ್ರಿ ಶಾಂತಾ ಕುಂಟಿನಿ, ಸಾಹಿತಿ ವೈಲೇಶ್ ಪಿ ಎಸ್ ಕೊಡಗು, ಗೋಪಾಲ ಕೃಷ್ಣ ಭಟ್ ಮಾನವಳಿಕೆ, ಕವಿಗೋಷ್ಠಿ ಉದ್ಘಾಟಕರಾದ ಹಿರಿಯ ಸಾಹಿತಿ ಹಾ ಮ ಸತೀಶ್, ವೀರೇಶ್ ಎಂ.ಎಸ್ ಸಿಂಧನೂರು ಮುಖ್ಯ ಅತಿಥಿಗಳಾಗಿದ್ದರು. ಖ್ಯಾತ ಕವಯಿತ್ರಿ ವಿಂಧ್ಯಾ ಎಸ್ ರೈ ಅವರು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.


ಒಟ್ಟು 40 ಜನ ಕವಿಗಳು ಭಾಗವಹಿಸಿದ್ದರು. ಶ್ರೀಮತಿ ಸುಮಾ ಕಿರಣ್ ಮಣಿಪಾಲ್ ಮತ್ತು ಶ್ರೀಮತಿ ಆಶಾ ಮಯ್ಯ ಹಾಗೂ ಸುಮಂಗಲ ಲಕ್ಷ್ಮಣ ಕೋಳಿವಾಡ ನಿರೂಪಿಸಿದರು. ಪೆರುಮಾಳ ಲಕ್ಷ್ಮಣ ಐವರ್ನಾಡು ಪ್ರಾರ್ಥನೆ ಹಾಡಿದರು. ಸಮ್ಯಕ್ತ್ ಜೈನ ಕಡಬ ಮತ್ತು ನಾರಾಯಣ್ ಕುಂಬ್ರ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم